ಇತಿಹಾಸದುದ್ದಕ್ಕೂ ಜನರು ತಮ್ಮ ತವರು ದೇಶಗಳನ್ನು ಬಿಟ್ಟು ವಲಸೆ ಹೋಗುತ್ತಲೇ ಇದ್ದಾರೆ. ಇಂದು, ವಿಶ್ವದಾದ್ಯಂತ ಕೋಟಿಗಟ್ಟಲೆ ಜನರು ತಮ್ಮ ಜನ್ಮಸ್ಥಳವಲ್ಲದ ದೇಶಗಳಲ್ಲಿ ವಾಸಿಸುತ್ತಿದ್ದಾರೆ.
ಸಂಯುಕ್ತ ರಾಷ್ಟ್ರ ಸಂಘದ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ಇಲಾಖೆಯ ಅಂದಾಜಿನ ಪ್ರಕಾರ, ವಿಶ್ವದಾದ್ಯಂತ 281 ಮಿಲಿಯನ್ ಅಂತರರಾಷ್ಟ್ರೀಯ ವಲಸಿಗರಿದ್ದಾರೆ. ಇದು ವಿಶ್ವ ಜನಸಂಖ್ಯೆಯ ಸುಮಾರು 3.5 ಪ್ರತಿಶತವಾಗಿದೆ. 2000 ರಲ್ಲಿ ಇದು 2.8 ಪ್ರತಿಶತವಾಗಿತ್ತು.
ಭಾರತ, ಇತ್ತೀಚೆಗೆ ವಿಶ್ವದ ಅತಿ ಹೆಚ್ಚು ಜನಸಂಖ್ಯೆಯ ದೇಶವಾಗಿ ಚೀನಾವನ್ನು ಮೀರಿಸಿದೆ. ಯುಎನ್‌ಎಫ್‌ಪಿಎ 2023 ರ ಪ್ರಕಾರ, ಭಾರತದ ಜನಸಂಖ್ಯೆ ಸುಮಾರು 1.4286 ಬಿಲಿಯನ್ (ಅಥವಾ 142.86 ಕೋಟಿ) ತಲುಪಿದೆ. ಭಾರತವು ವಿಶ್ವದಲ್ಲಿ ಅತಿ ಹೆಚ್ಚು ವಲಸಿಗರನ್ನು ಹೊಂದಿರುವ ದೇಶವಾಗಿದೆ.
ಸಂಯುಕ್ತ ರಾಷ್ಟ್ರಗಳ ವಿಶ್ವ ವಲಸೆ ವರದಿ 2024 ರ ಪ್ರಕಾರ, ಭಾರತವು ವಿಶ್ವದ ಅತಿ ಹೆಚ್ಚು ಸಂಖ್ಯೆಯ ಅಂತರರಾಷ್ಟ್ರೀಯ ವಲಸಿಗರ ಮೂಲವಾಗಿದೆ. ಸುಮಾರು 18 ಮಿಲಿಯನ್ ಭಾರತೀಯರು ವಿದೇಶಗಳಲ್ಲಿ ವಾಸಿಸುತ್ತಿದ್ದಾರೆ.
2024 ರ ಮೇ ತಿಂಗಳಿನಂತೆ, ವಿಶ್ವದಾದ್ಯಂತ ಸುಮಾರು 35.42 ಮಿಲಿಯನ್ ಭಾರತೀಯ ಮೂಲದ ಜನರಿದ್ದಾರೆ. ಇದರಲ್ಲಿ ಸುಮಾರು 15.85 ಮಿಲಿಯನ್ ಅನಿವಾಸಿ ಭಾರತೀಯರು (ಎನ್‌ಆರ್‌ಐ) ಮತ್ತು ಸುಮಾರು 19.57 ಮಿಲಿಯನ್ ಭಾರತೀಯ ಮೂಲದ ವ್ಯಕ್ತಿಗಳು (ಪಿಐಒ) ಸೇರಿದ್ದಾರೆ ಎಂದು ಭಾರತದ ವಿದೇಶ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ವಿಶ್ವದಾದ್ಯಂತ ಅತಿ ಹೆಚ್ಚು ಭಾರತೀಯ ಜನಸಂಖ್ಯೆ ಹೊಂದಿರುವ ಟಾಪ್ 10 ದೇಶಗಳು
ನಂ. | ದೇಶ | ಅನಿವಾಸಿ ಭಾರತೀಯ (NRIs) | ಭಾರತೀಯ ಮೂಲದವರ (PIOs) | ಒಟ್ಟು ಭಾರತೀಯರ ಸಂಖ್ಯೆ |
1 | USA | 2,077,158 | 3,331,904 | 5,409,062 (5.4M) |
2 | UAE | 3,554,274 | 14,574 | 3,568,848 (3.6M) |
3 | Malaysia | 163,127 | 2,751,000 | 2,914,127 (2.9M) |
4 | Canada | 1,016,274 | 1,859,680 | 2,875,954 (2.8M) |
5 | Saudi Arabia | 2,460,603 | 2,906 | 2,463,509 (2.5M) |
6 | Myanmar | 2,660 | 2,000,000 | 2,002,660 (2.0M) |
7 | UK | 369,000 | 1,495,318 | 1,864,318 (1.9M) |
8 | South Africa | 60,000 | 1,640,000 | 1,700,000 (1.7M) |
9 | Sri Lanka | 7,500 | 1,600,000 | 1,607,500 (1.6M) |
10 | Kuwait | 993,284 | 2,244 | 995,528 (996K) |