alex Certify ʼಪಾವ್‌ʼ ನಿಂದ ಮಾಡಿದ ಡ್ರೆಸ್ ಧರಿಸಿದ ಯುವತಿ; ನೆಟ್ಟಿಗರ ತೀವ್ರ ವಿರೋಧ | Viral Video | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಪಾವ್‌ʼ ನಿಂದ ಮಾಡಿದ ಡ್ರೆಸ್ ಧರಿಸಿದ ಯುವತಿ; ನೆಟ್ಟಿಗರ ತೀವ್ರ ವಿರೋಧ | Viral Video

ಸೋಷಿಯಲ್ ಮೀಡಿಯಾದಲ್ಲಿ ವಿಚಿತ್ರವಾದ ಫ್ಯಾಷನ್ ಟ್ರೆಂಡ್ ವೈರಲ್ ಆಗಿದೆ. ರೀಲ್ಸ್ ಕ್ರಿಯೇಟರ್ ಸೋನಪಾಲ್ ಶರ್ಮಾ ಎಂಬ ಯುವತಿ ಪಾವ್ ಬ್ರೆಡ್‌ಗಳನ್ನು ಬಳಸಿಕೊಂಡು ಡ್ರೆಸ್ ಹಾಕಿಕೊಂಡು ವೀಡಿಯೋ ಮಾಡಿ ಹಂಚಿಕೊಂಡಿದ್ದಾರೆ.

ಈ ವೀಡಿಯೋದಲ್ಲಿ ಶರ್ಮಾ ಮೊದಲು ಸಾಂಪ್ರದಾಯಿಕ ಸೆಲವರ್ ಕಮೀಜ್ ಧರಿಸಿದ್ದಾರೆ. ನಂತರ ಪಾವ್ ಬ್ರೆಡ್‌ಗಳನ್ನು ಬಳಸಿ ಸೀಮ್‌ಲೆಸ್ ಡ್ರೆಸ್ ಮಾಡಿ ಧರಿಸಿದ್ದಾರೆ. ಈ ವಿಚಿತ್ರ ಫ್ಯಾಷನ್ ಸೆನ್ಸ್‌ಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅನೇಕ ನೆಟ್ಟಿಗರು ಈ ರೀತಿ ಆಹಾರವನ್ನು ವ್ಯರ್ಥ ಮಾಡುವುದು ಸರಿಯಲ್ಲ ಎಂದು ಕಮೆಂಟ್ ಮಾಡಿದ್ದಾರೆ. “ರೀಲ್ಸ್‌ಗಾಗಿ ಆಹಾರ ವ್ಯರ್ಥ ಮಾಡಬೇಡಿ” ಎಂದು ಕೆಲವರು ಕಿಡಿಕಾರಿದ್ದಾರೆ. “ಇವರ ಇಂಟರ್ನೆಟ್ ಕಟ್ ಮಾಡಿಬಿಡಿ” ಎಂದು ಕೆಲವರು ಕೋಪ ವ್ಯಕ್ತಪಡಿಸಿದ್ದಾರೆ.

 

View this post on Instagram

 

A post shared by Sonpal sharma (@sonpal_24)

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...