ಕಲಬುರಗಿ: ಬಾಕಿ ವೇತನ ಪಾವತಿ ಮಾಡಿ ಮರು ನೇಮಕ ಮಾಡಿಕೊಳ್ಳಲು ಲಂಚಕ್ಕೆ ಕೈಯೊಡ್ಡಿದ್ದ ಪಿಡಿಒ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಕಲಬುರಗಿ ತಾಲೂಕಿನ ಕವಲಗಾದಲ್ಲಿ ನಡೆದಿದೆ.
ಕವಲಗಾ (ಬಿ) ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರೀತಿ ರಾಜ್ ಲೋಕಾಯುಕ್ತ ಬಲೆಗೆ ಬಿದ್ದವರು. ಪಂಪ್ ಆಪರೇಟರ್ ಓರ್ವರ ಬಾಕಿ ವೇತನ ಪಾವತಿಸಿ ಮರು ನೇಮಕ ಮಾಡಿಕೊಳ್ಳಲು 17 ಸವಿರ ರೂಪಾಯಿ ಲಂಚದ ಹಣ ಪಡೆಯುತ್ತಿದ್ದ ವೇಳೆ ಪಿಡಿಒ ಪ್ರೀತಿ ರಾಜ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಪಂಪ್ ಆಪರೇಟರ್ ಗುರುಸಿದ್ದಯ್ಯ ಅವರು ನೀಡಿದ ದೂರಿನ ಮೇರೆಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು. ಗುರುಸಿದ್ದಯ್ಯ ಅವರ 6 ತಿಂಗಳ ವೇತನ ಬಾಕಿ ಇತ್ತು. ಬಾಕಿ ವೇತನ ಪಾವತಿ ಹಣ ಮಂಜೂರು ಆಡಲು ಹಾಗೂ ಮರು ನೇಮಕ ಮಡಿಕೊಳ್ಳಲು 17 ಸಾವಿರ ಲಂಚಕ್ಕೆ ಪ್ರೀತಿ ರಾಜ್ ಬೇಡಿಕೆ ಇಟ್ಟಿದ್ದರು. ಧರಿಯಾಪುರದ ಉಪ್ಪಿನ ಲೇಔಟ್ ನಿವಾಸದಲ್ಲಿ ಫೋನ್ ಪೇ ಮೂಲಕ ಹಣ ಪಡೆಯುವ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಪ್ರೀತಿ ರಾಜ್ ಅವರನ್ನು ವಶಕ್ಕೆ ಪಡೆದಿದ್ದಾರೆ.