ಮುಂಬೈ: ಚೈನಿಸ್ ಫುಡ್ ಸ್ಟಾಲ್ ನ ಗ್ರೈಂಡರ್ ಯಂತ್ರದಲ್ಲಿ ಸಿಲುಕಿ ಯುವಕನೊಬ್ಬ ಸಾವನ್ನಪ್ಪಿರುವ ದಾರುಣ ಘಟನೆ ಮುಂಬೈನ ವರ್ಲಿಯಲ್ಲಿ ನಡೆದಿದೆ.
19 ವರ್ಷದ ನಾರಾಯಣ ಯಾದವ್ ಮೃತ ಯುವಕ. ಜಾರ್ಖಂಡ್ ಮೂಲದ ನಾರಾಯಣ, ಮೂರ್ನಾಲ್ಕು ತುಂಗಳ ಹಿಂದಷ್ಟೇ ಕೆಲಸಕ್ಕೆಸೇರಿದ್ದ. ಸುಅರಕ್ಷತಾ ತರಬೇತಿಯನ್ನೂ ಯುವಕನಿಗೆ ನೀಡಿರಲಿಲ್ಲ ಎನ್ನಲಾಗಿದೆ.
ಫುಡ್ ಗ್ರೈಂಡರ್ ಬಳಿ ಕೆಲಸ ಮಾಡುತ್ತಿದ್ದಗ ಯುವಕನ ಶರ್ಟ್ ಗ್ರೈಂಡರ್ ಗೆ ಸಿಲುಕಿಕೊಂಡಿದ್ದು, ನೋಡನೋಡುತ್ತಿದ್ದಂತೆ ಯುವಕನೇ ಗ್ರೈಂಡರ್ ಒಳಗೆ ಹೋಗಿ ಬಿದ್ದಿದ್ದಾನೆ. ಸ್ಥಳದಲ್ಲೇ ಯುವಕ ಸಾವನ್ನಪ್ಪಿದ್ದಾನೆ.
ದಾದರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಚೈನೀಸ್ ಫುಡ್ ಸ್ಟಾಲ್ ಮಾಲೀಕ ಸಚಿನ ಕೋಥೇಕರ್ ವಿರುದ್ಧ ಎಫ್ಐಆರ್ ದಾಖಲಾಗಿದೆ.