ತಿರುವನಂತಪುರಂ: ಪ್ರಸಿದ್ಧ ಧಾರ್ಮಿಕ ಕೇಂದ್ರ ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಿಗೆ ಡಿಸೆಂಬರ್ 14ರ ವರೆಗಿನ ಕಳೆದ 29 ದಿನಗಳಲ್ಲಿ ಒಟ್ಟು 22 ಲಕ್ಷ ಭಕ್ತರು ಭೇಟಿ ನೀಡಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ 4.51 ಲಕ್ಷ ಅಧಿಕ ಭಕ್ತರು ಈ ಅವಧಿಯಲ್ಲಿ ಭೇಟಿ ನೀಡಿದ್ದಾರೆ.
ದೇವಸ್ಥಾನದ ಆದಾಯ ಕಳೆದ ಸಾಲಿಗೆ ಹೋಲಿಸಿದಲ್ಲಿ 22.76 ಕೋಟಿ ರೂಪಾಯಿಯಷ್ಟು ಹೆಚ್ಚಾಗಿದೆ ಎಂದು ತಿರುವಂಕೂರು ದೇವಸ್ಥಾನ ಮಂಡಳಿ ಅಧ್ಯಕ್ಷ ಪಿ.ಎಸ್. ಪ್ರಶಾಂತ್ ತಿಳಿಸಿದ್ದಾರೆ.
29 ದಿನದಲ್ಲಿ 22,67,976 ಲಕ್ಷ ಭಕ್ತರು ಭೇಟಿ ನೀಡಿದ್ದಾರೆ. ಒಟ್ಟು 163.89 ಕೋಟಿ ರೂಪಾಯಿ ಆದಾಯ ಬಂದಿದೆ. ಇದರಲ್ಲಿ ಅರವಣ ಪ್ರಸಾದ ಮಾರಾಟದಿಂದ 82.67 ಕೋಟಿ ಆದಾಯ ಬಂದಿದೆ ಎಂದು ಅವರು ತಿಳಿಸಿದ್ದಾರೆ.