ಶನಿವಾರ ಬೆಳಿಗ್ಗೆ ಅಲ್ಲು ಅರ್ಜುನ್ ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಯಾದ ನಂತರ, ಅಲ್ಲು ಅರ್ಜುನ್ ಬೆಂಬಲಕ್ಕೆ ನಿಂತಿರುವ ಚಲನಚಿತ್ರ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ, ಈ ವಿಷಯದ ಕುರಿತು ತೆಲಂಗಾಣ ಸಿಎಂ ರೇವಂತ್ ರೆಡ್ಡಿಯವರ ಕಾಲೆಳೆದಿದ್ದಾರೆ.
ಪುಷ್ಪ 2: ದಿ ರೂಲ್‌ನ ಪ್ರಥಮ ಪ್ರದರ್ಶನದ ವೇಳೆ ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ ಒಂದು ದಿನದ ನಂತರ ಅಲ್ಲು ಅರ್ಜುನ್ ಶನಿವಾರ ಬೆಳಿಗ್ಗೆ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಹೈದರಾಬಾದ್‌ನಲ್ಲಿ ಶುಕ್ರವಾರ ಚಿಕ್ಕಡಪಲ್ಲಿ ಪೊಲೀಸರು ಅಲ್ಲು ಅರ್ಜುನ್ ಅವರನ್ನು ಬಂಧಿಸಿದ್ದು, ಶನಿವಾರ ತೆಲಂಗಾಣ ಹೈಕೋರ್ಟ್ ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ. ಇದು ಡಿಸೆಂಬರ್ 4 ರಂದು ʼಪುಷ್ಪಾ 2ʼ ರ ಪ್ರದರ್ಶನದ ಸಮಯದಲ್ಲಿ ಅಭಿಮಾನಿಯೊಬ್ಬನ ಸಾವಿಗೆ ಸಂಬಂಧಿಸಿದ್ದಾಗಿದ್ದು, ಅಲ್ಲು ಅರ್ಜುನ್ ಬಂಧನ ಪ್ರಹಸನಕ್ಕೆ ಪ್ರತಿಕ್ರಿಯಿಸಿರುವ ರಾಮ್ ಗೋಪಾಲ್ ವರ್ಮಾ ಇದಕ್ಕೆ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಹೊಣೆಗಾರ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪುಷ್ಪ 2: ದಿ ರೂಲ್‌ನ ಕಲೆಕ್ಷನ್‌ಗೆ ಹೆಚ್ಚಿಸಲು ಇದನ್ನು ಮಾಡಿದ್ದಾರೆ ಎಂದು ಆರ್‌ಜಿವಿ ಎಕ್ಸ್‌ನಲ್ಲಿ (ಹಿಂದಿನ ಟ್ವಿಟರ್) ಸುದೀರ್ಘ ಟಿಪ್ಪಣಿಯನ್ನು ಪೋಸ್ಟ್ ಮಾಡಿದ್ದಾರೆ. “ತೆಲಂಗಾಣದ ಗೌರವಾನ್ವಿತ ಮುಖ್ಯಮಂತ್ರಿ @revanth_anumala ಅವರು @alluarjun ಅವರಿಗೆ ಏಕೆ ಈ ರೀತಿ ಮಾಡಿದರು ಎಂಬುದು ಪ್ರತಿಯೊಬ್ಬರಿಗೆ ಆಘಾತವಾಗಿದೆ, ಅವರು ತೆಲಂಗಾಣ ರಾಜ್ಯದ ನೆಚ್ಚಿನ ಮಗನಿಗೆ ಒಂದು ದೊಡ್ಡ ಪ್ರಚಾರವನ್ನು ನೀಡಲು ಬಯಸಿದ್ದರು ಎಂದು ನಾನು ಭಾವಿಸುತ್ತೇನೆ” ಎಂದು ತೆಲಂಗಾಣ ಸಿಎಂ ಗೆ ಟಾಂಗ್ ನೀಡಿದ್ದಾರೆ.
Regarding everybody’s SURPRISE SHOCK about why the Honourable chief minister of TELANGANA @revanth_anumala did this to @alluarjun , I think it is because he wanted to give a BIG PUBLICITY BOOST to the telangana state’s FAVOURITE SON for a HUGE RISE in #Pushpa2 ‘s week 2 ‘s…
— Ram Gopal Varma (@RGVzoomin) December 14, 2024