ಬಾಳೆಹೊನ್ನೂರು ರಂಭಾಪುರಿ ಮಠಕ್ಕೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ದಂಪತಿ ರೋಬೋಟಿಕ್ ಆನೆಯನ್ನು ಉಡುಗೊರೆಯಾಗಿ ನೀಡಿದ್ದು, ಶನಿವಾರ ಮಠದ ಆವರಣದಲ್ಲಿ ಶ್ರೀ ವೀರ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅನಾವರಣ ಮಾಡಿದ್ದಾರೆ,
ದೇವಾಲಯದ ಸಮಾರಂಭಗಳಲ್ಲಿ ಜೀವಂತ ಆನೆ ಬದಲಿಗೆ ವೀರಭದ್ರೇಶ್ವರ ಹೆಸರಿನ ಈ ಯಾಂತ್ರಿಕ ಆನೆಯನ್ನು ಬಳಕೆ ಮಾಡಲಾಗುವುದು. ಜೀವಂತ ಆನೆಯಂತೆಯೇ ಕಾಣುವ ಇದು ಮೂಗು, ಕಿವಿ, ಬಾಲ ಅಲ್ಲಾಡಿಸುತ್ತದೆ. ಮೂರು ಮೀಟರ್ ಎತ್ತರವಿದ್ದು 800 ಕೆಜಿ ತೂಕ ಹೊಂದಿದೆ.
ಶಿಲ್ಪ ಶೆಟ್ಟಿ ದಂಪತಿ ಮತ್ತು ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್(PETA) ಇಂಡಿಯಾ, ಕಂಪ್ಯಾxನ್ ಅನ್ಲಿಮಿಟೆಡ್ ಪ್ಲಸ್ ಆಕ್ಷನ್ ಸಂಸ್ಥೆಯವರು ಮಠಕ್ಕೆ ಉಡುಗೊರೆಯಾಗಿ ಇದನ್ನು ನೀಡಿದ್ದಾರೆ ಎಂದು ಹೇಳಲಾಗಿದೆ.