WPL ಹರಾಜು ಪ್ರಕ್ರಿಯೆ: ಮುಂಬೈ ಇಂಡಿಯನ್ಸ್ ತಂಡಕ್ಕೆ ಸೇರ್ಪಡೆಯಾದ ಆಲ್ ರೌಂಡರ್ ʼನಾಡಿನ್ ಡಿ ಕ್ಲರ್ಕ್ʼ 15-12-2024 7:40PM IST / No Comments / Posted In: Featured News, Live News, Sports ಇಂದು ವುಮೆನ್ಸ್ ಪ್ರೀಮಿಯರ್ ಲೀಗ್ ನ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು, ದಕ್ಷಿಣ ಆಫ್ರಿಕಾ ತಂಡದ ಆಲ್ ರೌಂಡರ್ ನಾಡಿನ್ ಡಿ ಕ್ಲರ್ಕ್ ಮುಂಬೈ ಇಂಡಿಯನ್ಸ್ ಪಾಲಾಗಿದ್ದಾರೆ. 24 ವರ್ಷದ ನಾಡಿನ್ ಡಿ ಕ್ಲರ್ಕ್ ಅವರನ್ನು ಮುಂಬೈ ಇಂಡಿಯನ್ಸ್ ಪ್ರಾಂಚೈಸಿ ಮೂವತ್ತು ಲಕ್ಷ ರೂ. ಗಳಿಗೆ ಖರೀದಿ ಮಾಡುವ ಮೂಲಕ ಒಳ್ಳೆಯ ನಿರ್ಧಾರ ಮಾಡಿದೆ. ಕಳೆದ ಬಾರಿಯ ಚಾಂಪಿಯನ್ ಮಹಿಳಾ ಆರ್ಸಿಬಿ ತಂಡದಲ್ಲಿದ್ದ ಇವರು ಇದೀಗ ಮುಂಬೈ ಇಂಡಿಯನ್ಸ್ ಗೆ ಸೇರ್ಪಡೆಯಾಗಿದ್ದು, ಆನೆ ಬಲ ಬಂದಂತಾಗಿದೆ. ವೆಸ್ಟ್ ಇಂಡೀಸ್ ನ ಡಿಯಾಂಡ್ರಾ ಡಾಟಿನ್ ಅವರನ್ನು ಗುಜರಾತ್ ಜೈಂಟ್ಸ್ 1.70 ಕೋಟಿ ರೂ. ಗಳಿಗೆ ಖರೀದಿ ಮಾಡಿದರೆ, ನಂದಿನಿ ಕಶ್ಯಪ್ 10 ಲಕ್ಷ ರೂ. ಗಳಿಗೆ ಡೆಲ್ಲಿ ಕ್ಯಾಪಿಟಲ್ಸ್ ಪಾಲಾಗಿದ್ದಾರೆ. ಸಾಕಷ್ಟು ಬಲಿಷ್ಠ ಆಟಗಾರ್ತಿಯರನ್ನೇ ಖರೀದಿ ಮಾಡುವಲ್ಲಿ ಹಿಂಜರಿದಿದ್ದು WPL ಅಭಿಮಾನಿಗಳಿಗೆ ಅಚ್ಚರಿ ಮೂಡಿದೆ. View this post on Instagram A post shared by CricTracker (@crictracker)