alex Certify 2025 ರಲ್ಲಿ ಭಾರತದಿಂದ ವಿಶ್ವನಾಯಕನ ಉದಯ; ಫ್ರೆಂಚ್‌ ಜ್ಯೋತಿಷಿ ʼನಾಸ್ಟ್ರಾಡಾಮಸ್ʼ ಭವಿಷ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

2025 ರಲ್ಲಿ ಭಾರತದಿಂದ ವಿಶ್ವನಾಯಕನ ಉದಯ; ಫ್ರೆಂಚ್‌ ಜ್ಯೋತಿಷಿ ʼನಾಸ್ಟ್ರಾಡಾಮಸ್ʼ ಭವಿಷ್ಯ

ನಾಸ್ಟ್ರಾಡಾಮಸ್, 16 ನೇ ಶತಮಾನದ ಫ್ರೆಂಚ್ ಜ್ಯೋತಿಷಿ, ಅವರು ಈ ಹಿಂದೆ ಅನೇಕ ಘಟನೆಗಳ ಕುರಿತು ಭವಿಷ್ಯ ನುಡಿದಿದ್ದು ಅವುಗಳಲ್ಲಿ ಹಲವು ನಿಜವಾಗಿದ್ದವು. ಉದಾಹರಣೆಗೆ, ಹಿಟ್ಲರ್ ನ ಉದಯ, 9/11 ದಾಳಿ ಮತ್ತು ಕೋವಿಡ್ -19 ರ ಕುರಿತು ಮೊದಲೇ ಊಹಿಸಿದ್ದು, ಹೀಗಾಗಿ ಜನರು ಅವರನ್ನು ನಂಬುತ್ತಾರಲ್ಲದೇ ಅವರ ಮುಂದಿನ ಭವಿಷ್ಯವಾಣಿಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಕುತೂಹಲಗಳಾಗಿರುತ್ತಾರೆ.

2025 ರ ಸಮೀಪಿಸುತ್ತಿರುವ ಮಧ್ಯೆ, ಭಾರತದ ಬಗ್ಗೆ ನಾಸ್ಟ್ರಾಡಾಮಸ್ ಮಾಡಿದ ಕೆಲವು ಭವಿಷ್ಯವಾಣಿಯನ್ನು ಕೆಲವರು ಬಹಿರಂಗಪಡಿಸಿದ್ದಾರೆ. ಈ ಭವಿಷ್ಯವಾಣಿ ಯಾವುದು ಎಂದು ತಿಳಿಯೋಣ.

ನಾಸ್ಟ್ರಾಡಾಮಸ್‌ ಭವಿಷ್ಯವಾಣಿ ಪ್ರಕಾರ ಭಾರತದಲ್ಲಿ ಒಬ್ಬ ಹೊಸ ವಿಶ್ವ ನಾಯಕನ ಉದಯವಾಗುತ್ತದೆ ಎಂದು ಹೇಳಲಾಗಿದೆ. ಹೆಸರು ಇನ್ನೂ ನಿಗೂಢವಾಗಿದ್ದರೂ, ಗೊಂದಲದ ಸಮಯದಲ್ಲಿ ಜಾಗತಿಕ ಶಾಂತಿ ಮತ್ತು ನಾಯಕತ್ವದಲ್ಲಿ ಈ ವ್ಯಕ್ತಿಯ ಪ್ರಮುಖ ಪಾತ್ರ ಮತ್ತು ಸಂಭಾವ್ಯ ಮೂರನೇ ವಿಶ್ವಯುದ್ಧವನ್ನು ಅವರ ಸಹಾಯದಿಂದ ತಪ್ಪಿಸಬಹುದು ಎಂದು ಊಹಿಸಲಾಗಿದೆ.

ನಾಸ್ಟ್ರಡಾಮಸ್ ಈ ನಾಯಕನನ್ನು ಸಮುದ್ರಗಳಿಂದ ಸುತ್ತುವರಿದ ಪ್ರದೇಶದಲ್ಲಿ ಜನಿಸಿದವನು ಎಂದು ವಿವರಿಸಿದ್ದು, ಇದು ಭಾರತದ ಭೌಗೋಳಿಕತೆಯ ಬಗ್ಗೆ ಸುಳಿವು ನೀಡುತ್ತದೆ. ಈ ವ್ಯಕ್ತಿಯು ನಿರ್ಣಾಯಕ ಸಮಯದಲ್ಲಿ ಹೊರಹೊಮ್ಮುತ್ತಾರೆ. ಜಗತ್ತು ಸವಾಲುಗಳನ್ನು ಎದುರಿಸಿದಾಗ ಭರವಸೆ ಮತ್ತು ನಿರ್ದೇಶನವನ್ನು ನೀಡುತ್ತಾರೆ ಎನ್ನಲಾಗಿದೆ.

ನಾಸ್ಟ್ರಾಡಾಮಸ್‌ನ ಭವಿಷ್ಯವಾಣಿಯು ಈ ಸಂರಕ್ಷಕ ವ್ಯಕ್ತಿಯ ರಾಜಕೀಯ ಮತ್ತು ಸಾಮಾಜಿಕ ಬಿಕ್ಕಟ್ಟುಗಳನ್ನು ನ್ಯಾವಿಗೇಟ್ ಮಾಡುವ ಸಾಮರ್ಥ್ಯವನ್ನು ಎತ್ತಿ ತೋರಿಸುತ್ತದೆ. ಬುದ್ಧಿವಂತಿಕೆ ಮತ್ತು ನಾಯಕತ್ವದೊಂದಿಗೆ, ಅವರು ಜಾಗತಿಕ ಸವಾಲುಗಳ ಸಮಯದಲ್ಲಿ ಶಾಂತಿಯನ್ನು ಸ್ಥಾಪಿಸುವ ನಿರೀಕ್ಷೆಯಿದೆ.

ಸವಾಲಿನ ಸಮಯದಲ್ಲಿ ಈ ವ್ಯಕ್ತಿ ಜಾಗತಿಕವಾಗಿ ಸಾಮರಸ್ಯವನ್ನು ತರುವ ನಿರೀಕ್ಷೆಯಿದೆ. ಅಲ್ಲದೇ ಅವರ ಶಕ್ತಿ ಮತ್ತು ಖ್ಯಾತಿಯು ಪ್ರಪಂಚದಾದ್ಯಂತ ಬೆಳೆಯುತ್ತಲೇ ಇರುತ್ತದೆ.

ಈ ಮೂಲಕ, ಜಾಗತಿಕ ವೇದಿಕೆಯಲ್ಲಿ ಪ್ರಮುಖ ಪಾತ್ರ ವಹಿಸುವ ಭಾರತದ ಸಾಮರ್ಥ್ಯವನ್ನು ನಾಸ್ಟ್ರಾಡಾಮಸ್ ಒತ್ತಿ ಹೇಳುತ್ತಾನೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...