ತುಮಕೂರು: ಸೋಡಿಯಂ ಸ್ಫೋಟಕ ಎಸೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಡ್ರೋನ್ ಪ್ರತಾಪ್ ನನ್ನು ಮೂರು ದಿನ ಪೊಲೀಸ್ ಕಸ್ಟಡಿಗೆ ನೀಡಿ ತುಮಕೂರು ಜಿಲ್ಲೆಯ ಮಧುಗಿರಿ ನ್ಯಾಯಾಲಯ ಆದೇಶಿಸಿದೆ.
ಮಧುಗಿರಿ ವೃತ್ತದ ಮಿಡಿಗೇಶಿ ಪೊಲೀಸ್ ಠಾಣಾ ವ್ಯಾಪ್ತಿಯ ಜನಕಲೋಟಿ ಗ್ರಾಮದ ಶ್ರೀ ರಾಯರ ಬೃಂದಾವನ ಫಾರಂ ಕೃಷಿಹೊಂಡದಲ್ಲಿ ಸ್ಫೋಟಕ ವಸ್ತುವನ್ನು ಡ್ರೋನ್ ಪ್ರತಾಪ್ ಸಿಡಿಸಿದ್ದರು. ಸ್ಪೋಟದಿಂದ ಭಾರಿ ಎತ್ತರಕ್ಕೆ ನೀರು ಚಿಮ್ಮಿತ್ತು. ಜನ ಭಯ ಬೀಳುವಂತಾಗಿತ್ತು. ಈ ವಿಡಿಯೋ ವೈರಲ್ ಆಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ನಿನ್ನೆ ಡ್ರೋನ್ ಪ್ರತಾಪ್ ನನ್ನು ಬಂಧಿಸಲಾಗಿತ್ತು.
ಆರೋಪಿಯನ್ನು ಪೊಲೀಸರು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಹೆಚ್ಚಿನ ವಿಚಾರಣೆಗಾಗಿ ಮೂರು ದಿನ ಮಿಡಿಗೇಶಿ ಠಾಣೆ ಪೊಲೀಸರ ವಶಕ್ಕೆ ನೀಡಿ ಕೋರ್ಟ್ ಆದೇಶಿಸಿದೆ.