ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ!

ಬೆಳಗಾವಿ: ಗರ್ಭಿಣಿಯೊಬ್ಬರು ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ್ದು, ಮೂವರು ಕಂದಮ್ಮಗಳು ಆರೋಗ್ಯವಾಗಿದ್ದಾರೆ. ಈ ಅಪರೂಪದ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿಯಲಿ ನಡೆದಿದೆ.

ಸಾಮಾನ್ಯವಾಗಿ ಟ್ವಿನ್ಸ್ ಅಥವಾ ಅವಳಿ ಮಕ್ಕಳಿಗೆ ಜನ್ಮ ನೀಡುವುದನ್ನು ನೋಡಿದ್ದೇವೆ. ಆದರೆ ತ್ರಿವಳಿ ಮಕ್ಕಳ ಜನನ ಅಪರೂಪ. ಅದರಲ್ಲಿಯೂ ಮೂವರು ಮಕ್ಕಳು ಹಾಗೂ ತಾಯಿ ಆರೋಗ್ಯವಾಗಿದ್ದಾರೆ ಎಂಬುದು ಕುಟುಂಬದವರ ಸಂತಸ-ಸಂಭ್ರಮ ಇನ್ನಷ್ಟು ಇಮ್ಮಡಿಗೊಳಿಸಿದೆ.

ಮೂಡಲಗಿಯ ಆರೋಗ್ಯ ಆಧಾರ ಆಸ್ಪತ್ರೆಯಲ್ಲಿ ಕಂಕಣವಾಡಿ ಮೂಲದ ಪೂಜಾ ಸುರೇಶ ಎಂಬ ಗಂಭಿರ್ಣಿ ಮೂವರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಎರಡು ಗಂಡು ಹಾಗೂ ಒಂದು ಹೆಣ್ಣು ಮಗು ಜನಿಸಿದ್ದು , ಮೂರು ನವಜಾತ ಶಿಶುಗಳೂ ಆರೋಗ್ಯವಾಗಿದ್ದಾರೆ. ಸ್ತ್ರೀರೋಗ ತಜ್ಞೆ ಡಾ. ಮಯೂರಿ ಕಡಾಡಿ ಸಿಸೇರಿಯನ್ ಮೂಲಕ ಹೇರಿಗೆ ಮಾಡಿಸಿದ್ದಾರೆ.

ತ್ರಿವಳಿ ಮಕ್ಕಳ ಹೆರಿಗೆ ಅಪರೂಪ. ಅದರಲ್ಲಿಯೂ  ಮೂರು ನವಜಾತ ಶಿಶುಗಳು ಆರೋಗ್ಯ ಪೂರ್ಣವಾಗಿದ್ದು, ತಾಯಿಯೂ ಆರೋಗ್ಯವಾಗಿದ್ದಾರೆ ಎಂಬುದು ಅಪರೂಪದಲ್ಲಿಯೇ ಅಪರೂಪದ ಸಂದರ್ಭ ಎಂದು ಡಾ.ಮಯೂರಿ ಸಂತಸ ಹಂಚಿಕೊಂಡಿದ್ದಾರೆ.

ತಾಯಿ ಹಾಗೂ ತ್ರಿವಳಿ ಮಕ್ಕಳು ಆರೋಗ್ಯವಾಗಿದ್ದು, ಡಿಸ್ಚಾರ್ಜ್ ಮಾಡಿ ಆಸ್ಪತ್ರೆಯಿಂದ ಮನೆಗೆ ಕಳಿಸಿದ್ದೇವೆ ಎಂದು ಮಕ್ಕಳ ತಜ್ಞ ಡಾ. ಮಹಾಂತೇಶ ಕಡಾಡಿ ಕೂಡ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read