alex Certify ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆಯಲ್ಲಿ ಸಂವಿಧಾನದ ಉಲ್ಲಂಘನೆ; ಸುಮೋಟೋ ಕೇಸ್‌ ದಾಖಲಿಸಿಕೊಳ್ಳಲು ಹೈಕೋರ್ಟ್‌ ನ್ಯಾಯಮೂರ್ತಿಗಳಿಗೆ ಮನವಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆಯಲ್ಲಿ ಸಂವಿಧಾನದ ಉಲ್ಲಂಘನೆ; ಸುಮೋಟೋ ಕೇಸ್‌ ದಾಖಲಿಸಿಕೊಳ್ಳಲು ಹೈಕೋರ್ಟ್‌ ನ್ಯಾಯಮೂರ್ತಿಗಳಿಗೆ ಮನವಿ

ಮಂಡ್ಯದಲ್ಲಿ ಇದೇ ತಿಂಗಳ 20 ರಿಂದ 3 ದಿನಗಳ ಕಾಲ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಆಹ್ವಾನ ಪತ್ರಿಕೆಯಲ್ಲಿ ಸಂವಿಧಾನದ ಆರ್ಟಿಕಲ್‌ 18 ಉಲ್ಲಂಘಿಸಲಾಗಿದ್ದು, ಸುಮೋಟೋ ಕೇಸ್‌ ದಾಖಲಿಸುವಂತೆ ಕೋರಿ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗೆಳಿಗೆ ಮನವಿ ಮಾಡಿ ಪತ್ರ ಬರೆಯಲಾಗಿದೆ. ಇದರ ಸಂಪೂರ್ಣ ವಿವರ ಇಂತಿದೆ.

ಇವರಿಗೆ,
ಘನವೆತ್ತ ಮುಖ್ಯ ನ್ಯಾಯಮೂರ್ತಿಗಳು
ಕರ್ನಾಟಕ ಉಚ್ಛನ್ಯಾಯಾಲಯ
ಬೆಂಗಳೂರು
ಮಾನ್ಯರೇ,

ವಿಷಯ: ಮಂಡ್ಯದ ಕನ್ನಡ ಸಾಹಿತ್ಯ ಸಮ್ಮೇಳನ -2024 ರಲ್ಲಿ ಸಂವಿಧಾನದ ಅರ್ಟಿಕಲ್ 18 ಉಲ್ಲಂಘನೆಯಾಗಿದ್ದು suo motu ಕೇಸ್ ದಾಖಲಿಸಿಕೊಳ್ಳಲು ಮನವಿ.

ಈ ಮೇಲ್ಕಂಡ ವಿಷಯ ಸಂಬಂಧಸಿದಂತೆ ಮಂಡ್ಯ ನಗರದಲ್ಲಿ 2024 ರ ಡಿಸೆಂಬರ್ 20, 21, 22 ರಂದು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು ಇದನ್ನು ಕನ್ನಡ ಸಾಹಿತ್ಯ ಪರಿಷತ್ತು (ಸರ್ಕಾರಿ ಅನುದಾನಿತ ಸ್ವಾಯತ್ತ ಸಂಸ್ಥೆ) ಮತ್ತು ಜಿಲ್ಲಾಡಳಿತ, ಕರ್ನಾಟಕ ಸರ್ಕಾರವೇ ನಡೆಸುತ್ತಿದೆ.

ಸಮ್ಮೇಳನದ ಸ್ವಾಗತ ಸಮಿತಿಯು ಬಿಡುಗಡೆಗೊಳಿಸಿರುವ ಆಹ್ವಾನ ಪತ್ರಿಕೆಯಲ್ಲಿ ಮೈಸೂರು ರಾಜಕುಟುಂಬದ ಸದಸ್ಯರಾದ ಶ್ರೀಮತಿ ಪ್ರಮೋದಾದೇವಿ ಒಡೆಯರ್ ಅವರ ಹೆಸರನ್ನು ಉಲ್ಲೇಖಿಸುವಾಗ ”ಶ್ರೀಮನ್ ಮಹಾರಾಣಿ’ ಎಂಬುವ ಟೈಟಲ್ ಅನ್ನು ಸೇರಿಸಲಾಗಿದೆ. ಕರ್ನಾಟಕ ಸರ್ಕಾರದ ಅಧಿಕೃತ ಕಾರ್ಯಕ್ರಮದಲ್ಲಿ ಸಂವಿಧಾನದ ಆರ್ಟಿಕಲ್ 18 ಅನ್ನು ಸ್ಪಷ್ಟವಾಗಿ ಉಲ್ಲಂಘಿಸಲಾಗಿದೆ. ಈ ತರಹದ ಉಲ್ಲಂಘನೆಯು ಮಾಧ್ಯಮಗಳಲ್ಲಿಯೂ ಸಹ ಯಥೇಚ್ಛವಾಗಿ ನಡೆಯುತ್ತಿದೆ. ಇಂಡಿಯಾ ಉಪಖಂಡದಲ್ಲಿ ಎಲ್ಲರನ್ನು ಸರಿಸಮಾನರಾಗಿ ಕಾಣುವ ಪ್ರಜಾಸತ್ತಾತ್ಮಕ ಗಣರಾಜ್ಯವು ಜಾರಿಯಲ್ಲಿರುವಾಗ ಅರಸೊತ್ತಿಗೆಯ ಟೈಟಲ್ ಗಳನ್ನು ಬಳಸುವಂತಿಲ್ಲ ಮತ್ತು ಬಳಸಕೂಡದೆಂದು ಸಂವಿಧಾನವೇ ಸ್ವಷ್ಟವಾಗಿ ಹೇಳಿದೆ.

In India, through article 18 the titles like “Maharaja”, “Raja” and “Rao Bahadur” are abolished. The main cause of this abolition of the title is to express equality in the country and there’s regulation. Article 18 abolished the titles and besides this, the article also prohibits every state to confer any titles on anybody. Only academic and military distinctions are exempted from this abolition of title.
Article 18: Abolition of titles.
(1) No title, not being a military or academic distinction, shall be conferred by the State.
(2) No citizen of India shall accept any title from any foreign State.
(3) No person who is not a citizen of India shall, while he holds any office of profit or trust under the State, accept without the consent of the President any title from any foreign State.
(4) No person holding any office of profit or trust under the State shall, without the consent of the President, accept any present, emolument, or office of any kind from or under any foreign State.

ರಾಜ್ಯಾಂಗದ ಸುಪರ್ದಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲೇ ಇಂತಹ ಸಾಂವಿಧಾನಿಕ ಉಲ್ಲಂಘನೆಯಾದಲ್ಲಿ ಮಾಧ್ಯಮಗಳು, ನಾಗರೀಕ ಸಮಾಜದಲ್ಲಿ ಮತ್ತಷ್ಟು ಆಗುವುದು ನಿರೀಕ್ಷಿತ. ಆದ ಕಾರಣ ಈ ಕುರಿತಾಗಿ ತಾವು ಸು ಮೊಟೋ ಕೇಸ್ ದಾಖಲಿಸಿಕೊಂಡು ವಿಚಾರಣೆಗೆ ಮುಂದಾಬೇಕೆಂದು ಕಳಕಳಿಯ ಮನವಿ.

ವಂದನೆಗಳೊಂದಿಗೆ,
ರಾಜೇಂದ್ರ ಪ್ರಸಾದ್, ಮಂಡ್ಯ
ಕೃಷ್ಣೇಗೌಡ, ತಳಗವಾದಿ
ನಾಗೇಗವ್ಡ ಕೆ ಎಸ್ ಕೀಲಾರ

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...