ಮಂಡ್ಯ: ಮಗ ಮಾಡಿದ ತಪ್ಪಿಗೆ ತಂದೆ ಜೈಲು ಪಾಲಾದ ಘಟನೆ ಮಂಡ್ಯದಲ್ಲಿ ನಡೆದಿದೆ. ಮಂಡ್ಯ ಜೈಲಿನಲ್ಲಿದ್ದ ಮಗ ರೌಡಿಶೀಟರ್ ಮಧುಸೂದನ್ ನನ್ನು ನೋಡಲು ಬಂದ ತಂದೆ ಶಿವಣ್ಣ ಜೈಲು ಸೇರಿದ್ದಾರೆ.
ಜೈಲಿಗೆ ಹೊರಟಿದ್ದ ತಂದೆಗೆ ಸ್ನೇಹಿತ ತಂದು ಕೊಡುವ ಬಟ್ಟೆ ಬ್ಯಾಗ್ ತೆಗೆದುಕೊಂಡು ಬರುವಂತೆ ಮಧುಸೂದನ್ ಕರೆ ಮಾಡಿ ಹೇಳಿದ್ದಾನೆ. ಆತ ಕೊಟ್ಟ ಬಟ್ಟೆ ಬ್ಯಾಗ್ ತೆಗೆದುಕೊಂಡು ಮಗನನ್ನು ನೋಡಲು ಜೈಲಿಗೆ ಹೋಗಿದ್ದ ಶಿವಣ್ಣ ಅವರಿಗೆ ಅದರಲ್ಲಿ ಗಾಂಜಾ ಇರುವುದು ಗೊತ್ತಿರಲಿಲ್ಲ. ಜೈಲಿನ ಸಿಬ್ಬಂದಿ ಪರಿಶೀಲನೆ ನಡೆಸಿದಾಗ ಬಟ್ಟೆ ಬ್ಯಾಗ್ ನಲ್ಲಿ ಗಾಂಜಾ ಇರುವುದು ಪತ್ತೆಯಾಗಿದ್ದು, ಕೂಡಲೇ ಶಿವಣ್ಣ ಅವರನ್ನು ಜೈಲಿನ ಸಿಬ್ಬಂದಿ ವಶಕ್ಕೆ ಪಡೆದುಕೊಂಡಿದ್ದಾರೆ
ಮಗನ ಮಾತು ಕೇಳಿ ತಂದೆ ಅಪರಿಚಿತನ ಬ್ಯಾಗ್ ತಂದಿದ್ದಾನೆ. ಆತ ಕೊಟ್ಟ ಬ್ಯಾಗ್ ನಲ್ಲಿ 20 ಗ್ರಾಂ ಗಾಂಜಾ ಪತ್ತೆಯಾಗಿದೆ. ಮಗನನ್ನು ನೋಡಲು ಮಂಡ್ಯ ಜಿಲ್ಲಾ ಕಾರಾಗೃಹಕ್ಕೆ ಆಗಮಿಸಿದ ಶಿವಣ್ಣ ತಾವೇ ಬಂಧನಕ್ಕೊಳಗಾಗಿದ್ದಾರೆ. ಶಿವಣ್ಣ ಮತ್ತು ಮಗ ಮಧುಸೂದನ ಒಂದೇ ಜೈಲಿನಲ್ಲಿದ್ದಾರೆ.