ಕೀರ್ತಿ ಸುರೇಶ್ ಮತ್ತು ಆಂಟನಿ ತಟ್ಟಿಲ್ ಅಧಿಕೃತವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಗೋವಾದಲ್ಲಿ ನಡೆದ ಸುಂದರ ಸಮಾರಂಭದಲ್ಲಿ ಕೀರ್ತಿ ಸುರೇಶ್ ತನ್ನ ಗೆಳೆಯ ಆಂಟನಿ ತಟ್ಟಿಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಫೋಟೋಗಳನ್ನು ಕೀರ್ತಿ ಸುರೇಶ್ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.ಆಂಟನಿ ತಟ್ಟಿಲ್ ಕ್ರಿಶ್ಚಿಯನ್ ಆಗಿದ್ದು, ಹಿಂದೂ ಸಂಪ್ರದಾಯದಂತೆ ಮದುವೆ ಆಗಿದ್ದಾರೆ.
ಕೀರ್ತಿ ಸುರೇಶ್ ಮತ್ತು ಆಂಟನಿ ತಟ್ಟಿಲ್ 15 ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದು, ಮನ ಮೆಚ್ಚಿದ ಹುಡುಗನ ಜೊತೆ ಕೀರ್ತಿ ಸುರೇಶ್ ಮದುವೆಯಾಗಿದ್ದಾರೆ.
ಕೀರ್ತಿ2000 ರ ದಶಕದ ಆರಂಭದಲ್ಲಿ ಬಾಲ ನಟಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ೨೦೧೩ ರ ಮಲಯಾಳಂ ಚಿತ್ರ ಗೀತಾಂಜಲಿ ಮೂಲಕ ಪ್ರಮುಖ ನಟಿಯಾಗಿ ಪಾದಾರ್ಪಣೆ ಮಾಡಿದರು. ಅವರು ರಿಂಗ್ ಮಾಸ್ಟರ್ (2014), ಇದು ಎನ್ನ ಮಾಯಂ (2015), ನೇನು ಶೈಲಜಾ, ರಜನಿಮುರುಗನ್ ಮತ್ತು ರೆಮೋ (2016), ಬೈರವಾ (2017) ಮತ್ತು ನೇನು ಲೋಕಲ್ (2017), ಸರ್ಕಾರ್, ಥಾನಾ ಸೆರ್ಂದಾ ಕೂಟಂ ಮತ್ತು ಮಹಾನಟಿ (2018) ಚಿತ್ರಗಳಲ್ಲಿ ನಟಿಸಿದ್ದಾರೆ. ಮಹಾನಟಿ ಚಿತ್ರದಲ್ಲಿನ ಅಭಿನಯಕ್ಕಾಗಿ ಅವರು ಅತ್ಯುತ್ತಮ ನಟಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದಿದ್ದಾರೆ.