ನಾಳೆ ಬಿಡುಗಡೆಯಾಗಲಿದೆ ‘ಬೇಗೂರು ಕಾಲೋನಿ’ ಟೀಸರ್ 12-12-2024 6:34PM IST / No Comments / Posted In: Featured News, Live News, Entertainment ಫ್ಲೈಯಿಂಗ್ ಕಿಂಗ್ ಮಂಜು ನಿರ್ದೇಶನದ ರಾಜೀವ್ ಹನು ಅಭಿನಯದ ‘ಬೇಗೂರು ಕಾಲೋನಿ’ ಚಿತ್ರದ ಟೀಸರ್ ನಾಳೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಲಿದೆ. ಕ್ಯಾರೆಕ್ಟರ್ ಮೋಷನ್ ಪೋಸ್ಟರ್ ಮೂಲಕ ಪಾತ್ರ ವರ್ಗಗಳನ್ನು ಪರಿಚಯಿಸಿದ್ದ ಚಿತ್ರತಂಡ ಇದೀಗ ಟೀಸರ್ ಬಿಡುಗಡೆ ಮಾಡುವುದರ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಘೋಷಣೆ ಮಾಡಿದೆ. ಈ ಚಿತ್ರದಲ್ಲಿ ರಾಜೀವ್ ಹನು ಮತ್ತು ಫ್ಲೈಯಿಂಗ್ ಕಿಂಗ್ ಮಂಜು ಸೇರಿದಂತೆ ಪಲ್ಲವಿ ಪರ್ವ, ಕೀರ್ತಿ ಭಂಡಾರಿ, ಪೋಸಾನಿ ಕೃಷ್ಣ ಮುರಳಿ, ಬಾಲ ರಾಜವಾಡಿ ಬಣ್ಣ ಹಚ್ಚಿದ್ದು, ಶ್ರೀಮಾ ಸಿನಿಮಾಸ್ ಬ್ಯಾನರ್ ನಲ್ಲಿ ಎಂ ಶ್ರೀನಿವಾಸ್ ಬಾಬು ನಿರ್ಮಾಣ ಮಾಡಿದ್ದಾರೆ. ಕಾರ್ತಿಕ್ ಕೇಸ್ ಛಾಯಾಗ್ರಹಣವಿದ್ದು, ಪ್ರಮೋದ್ ತಳವಾರ್ ಸಂಕಲನವಿದೆ. ಅಭಿನಂದನ್ ಕಶ್ಯಪ್ ಸಂಗೀತ ಸಂಯೋಜನೆ ನೀಡಿದ್ದಾರೆ.