ನವದೆಹಲಿ: ರಾಜಸ್ಥಾನದಲ್ಲಿ ದೌಸೌ ಜಿಲ್ಲೆಯಲ್ಲಿ ಕೊಳವೆಗೆ ಬಾವಿಗೆ ಬಿದ್ದಿದ್ದ 5 ವರ್ಷದ ಬಾಲಕ ಆರ್ಯನ್ ಸಾವನ್ನಪ್ಪಿದ್ದಾನೆ.
150 ಅಡಿ ಆಳದ ಕೊಳವೆ ಬಾವಿಯಲ್ಲಿ ಸಿಲುಕಿಕೊಂಡಿದ್ದ ಆರ್ಯನ್ ರಕ್ಷಣೆಗಾಗಿ ನಿರಂತರ ಕಾರ್ಯಾಚರಣೆ ನಡೆಸಲಾಗಿತ್ತು. ಬಾಲಕನನ್ನು ರಕ್ಷಣಾ ಪಡೆ ಸಿಬ್ಬಂದಿ ಹೊರಗೆ ತೆಗೆದಿದ್ದಾರೆ. 56 ಗಂಟೆಗಳ ಬಳಿಕ ಬಾಲಕನನ್ನು ಹೊರ ತೆಗೆದು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಪರೀಕ್ಷೆ ನಡೆಸಿದ ವೈದ್ಯರು ಬಾಲಕ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ಡಿಸೆಂಬರ್ 9 ರಂದು ಆಟವಾಡುತ್ತಿದ್ದಾಗ ಬಾಲಕ ಆರ್ಯನ್ ಕೊಳವೆ ಬಾವಿಗೆ ಬಿದ್ದಿದ್ದ. ಆಮ್ಲಜನಕ ಪೂರೈಕೆ ಮಾಡಿ ಆತನ ರಕ್ಷಣೆಗಾಗಿ ನಿರಂತರ ಕಾರ್ಯಾಚರಣೆ ನಡೆಸಲಾಗಿತ್ತು.