ಅನೈತಿಕ ಸಂಬಂಧದ ವಿಚಾರಕ್ಕೆ ರಾತ್ರಿ ಇಡೀ ನಡೆದ ಜಗಳದಲ್ಲಿ ಪತಿ ಕಂದಲಿಯಿಂದ ಕೊಚ್ಚಿ ತನ್ನ ಪತ್ನಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬೆಳ್ಳಂಬೆಳಿಗ್ಗೆ ಶಿಕಾರಿಪುರ ಟೌನ್ ರಾಘವೇಂದ್ರ ಬಡಾವಣೆಯಲ್ಲಿ ಈ ಘಟನೆ ನಡೆದಿದ್ದು, 40 ವರ್ಷದ ರೇಣುಕಾ ಕೊಲೆಯಾದ ದುರ್ದೈವಿಯಾಗಿದ್ದಾರೆ. ಈಕೆಯನ್ನು ಪತಿ ನಾಗರಾಜ್ ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ.
ದಂಪತಿ ನಡುವೆ ರಾತ್ರಿ ಇಡೀ ಜಗಳ ನಡೆದಿದ್ದು, ಬೆಳಗಿನ ಜಾವ ನಾಲ್ಕು ಗಂಟೆ ಸುಮಾರಿಗೆ ನಾಗರಾಜ ತನ್ನ ಪತ್ನಿ ರೇಣುಕಾಳನ್ನು ಕಂದಲಿಯಿಂದ ಕೊಚ್ಚಿ ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ. ಮೃತ ರೇಣುಕಾಳ ಶವ ಮನೆ ಮುಂಭಾಗದಲ್ಲಿ ಪತ್ತೆಯಾಗಿದ್ದು, ಆರೋಪಿ ನಾಗರಾಜನನ್ನು ಬಂಧಿಸಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.