ಹೈದರಾಬಾದ್: ತೆಲುಗು ನಟ ಮೋಹನ್ ಬಾಬು ಹೈದರಾಬಾದ್ ನಲ್ಲಿ ಮಾಧ್ಯಮದವರ ಮೇಲೆ ಹಲ್ಲೆ ನಡೆಸಿದ್ದು, ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ನಟ ಮೋಹನ್ ಬಾಬು ಮತ್ತು ಅವರ ಭದ್ರತಾ ಸಿಬ್ಬಂದಿ ಹೈದರಾಬಾದ್‌ನ ಜಲಪಲ್ಲಿಯಲ್ಲಿ ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ. ಮೋಹನ್ ಬಾಬು ಅವರ ಕುಟುಂಬಕ್ಕೆ ಸಂಬಂಧಿಸಿದ ವಿವಾದದ ಬಗ್ಗೆ ವರದಿ ಮಾಡಲು ಮಾಧ್ಯಮದವರು ಅಲ್ಲಿಗೆ ಬಂದಿದ್ದು, ಅನಿರೀಕ್ಷಿತವಾಗಿ ದಾಳಿಗೊಳಗಾಗಿದ್ದಾರೆ. ದಾಳಿಕೋರರು ಪತ್ರಕರ್ತರ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದು ಮಾತ್ರವಲ್ಲದೆ ಅವರ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಟಿವಿ9 ಮತ್ತು ಟಿವಿ5 ಪ್ರತಿನಿಧಿಗಳಿಗೆ ಗಾಯಗಳಾಗಿವೆ.
ಹಲ್ಲೆಗೊಳಗಾದವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೋಹನ್ ಬಾಬು ಅವರ ನಿವಾಸದಲ್ಲಿ ವರದಿಗಾರರು ಮತ್ತು ವಿಡಿಯೋ ಪತ್ರಕರ್ತರ ಮೇಲೆ ನಡೆದ ಹಲ್ಲೆಯನ್ನು ತೆಲಂಗಾಣ ರಾಜ್ಯ ವಿಡಿಯೋ ಜರ್ನಲಿಸ್ಟ್ ಅಸೋಸಿಯೇಷನ್ ಖಂಡಿಸಿದೆ. ಪೊಲೀಸರು ನಟ ಮೋಹನ್ ಬಾಬು ಮತ್ತು ಅವರ ಪುತ್ರನ ಗನ್ ಜಪ್ತಿ ಮಾಡಿದ್ದಾರೆ.