ಡಿಸೆಂಬರ್ 26 ರಿಂದ ಪ್ರೊ ಕಬಡ್ಡಿಯ ಪ್ಲೇ ಆಫ್ ಪಂದ್ಯಗಳು ಆರಂಭವಾಗಲಿದ್ದು, 26ಕ್ಕೆ ಎಲಿಮಿನೇಟರ್ ಹಾಗೂ 27 ರಂದು ಸೆಮಿಫೈನಲ್ ಪಂದ್ಯಗಳಿರಲಿವೆ. ಈ ಬಾರಿಯ ಪ್ರೊ ಕಬಡ್ಡಿಯ ಫೈನಲ್ ಗೆ ಯಾವ ತಂಡಗಳು ಎಂಟ್ರಿ ಕೊಡಲಿವೆ ಎಂಬುದು ಇನ್ನೇನು ಕೆಲವೇ ದಿನಗಳಲ್ಲಿ ನಿರ್ಧಾರವಾಗಲಿದೆ.
ಇಂದು ಪ್ರೊ ಕಬಡ್ಡಿಯ ಮೊದಲ ಪಂದ್ಯದಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ ಹಾಗೂ ಗುಜರಾತ್ ಜೈಂಟ್ಸ್ ಮುಖಾಮುಖಿಯಾಗಲಿದ್ದು, ಪ್ಲೇ ಆಫ್ ರೇಸ್ ನಲ್ಲಿರುವ ಜೈಪುರ್ ಪಿಂಕ್ ಪ್ಯಾಂಥರ್ಸ್ ತಂಡಕ್ಕೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.
ಮತ್ತೊಂದೆಡೆ ಗುಜರಾತ್ ಜೈಂಟ್ಸ್ ತಂಡ ಈಗಾಗಲೇ ಪ್ಲೇ ಆಫ್ ಸ್ಥಾನವನ್ನು ಕಳೆದುಕೊಂಡಿದ್ದು, ತನ್ನ ಪ್ರತಿಷ್ಠೆಗಾಗಿ ಈ ಪಂದ್ಯವನ್ನಾಡಲಿದೆ. ಇದಾದ ಬಳಿಕ ಮತ್ತೊಂದು ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ಹಾಗೂ ಬೆಂಗಳೂರು ಬುಲ್ಸ್ ಮುಖಾಮುಖಿಯಾಗುತ್ತಿವೆ.