alex Certify ಕಾಲು ಜಾರಿ ಕೆರೆಗೆ ಬಿದ್ದ ಮಗ: ರಕ್ಷಿಸಲು ಹೋಗಿ ತಾಯಿಯೂ ನೀರುಪಾಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಲು ಜಾರಿ ಕೆರೆಗೆ ಬಿದ್ದ ಮಗ: ರಕ್ಷಿಸಲು ಹೋಗಿ ತಾಯಿಯೂ ನೀರುಪಾಲು

ರಾಯಚೂರು: ಬಟ್ಟೆ ತೊಳೆಯಲೆಂದು ಕೆರೆಗೆ ಹೋಗಿದ್ದ ವೇಳೆ ದುರಂತ ಸಂಭವಿಸಿದ್ದು, ಕಾಲು ಜಾರಿ ಕೆರೆಗೆ ಬಿದ್ದ ಮಗನನ್ನು ರಕ್ಷಿಸಲು ಹೋಗಿ ತಾಯಿಯೂ ನೀರುಪಾಲಾಗಿದ್ದಾರೆ. ತಾಯಿ-ಮಗ ನೀರಿನಲ್ಲಿ ಮುಳುಗಿ ಸವನ್ನಪ್ಪಿರುವ ಘಟನೆ ರಾಯಚೂರಿನ ಮಲಿಯಾಬಾದ್ ನಲ್ಲಿ ನಡೆದಿದೆ.

ರಾಧಮ್ಮ (32) ಹಾಗೂ ಪುತ್ರ ಸಂಜು (5) ಮೃತ ದುರ್ದೈವಿಗಳು. ರಾಧಮ್ಮ ಬಟ್ಟೆ ತೊಳೆಯಲೆದು ಕೆರೆಗೆ ಹೋಗಿದ್ದರು. ತಾಯಿ ಜೊತೆ ಬಾಲಕ ಸಂಜು ಕೂಡ ಹೋಗಿದ್ದ. ಈ ವೇಳೆ ಸಂಜು ಕಾಲು ಜಾರಿ ಕೆರೆಗೆ ಬಿದ್ದಿದ್ದಾನೆ. ಆತನನ್ನು ಕಾಪಾಡಲೆಂದು ಕೆರೆಗೆ ಇಳಿದ ರಾಧಾಮ್ಮ ಕೂಡ ನೀರು ಪಾಲಾಗಿದ್ದಾರೆ. ತಾಯಿ-ಮಗ ಇಬ್ಬರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಯರಗೇರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...