ತೆಲಂಗಾಣ : ವಾಟರ್ ಹೀಟರ್ ನಿಂದ ವಿದ್ಯುತ್ ಪ್ರವಹಿಸಿ ನವವಧು ದಾರುಣವಾಗಿ ಮೃತಪಟ್ಟ ಘಟನೆ ಮಂಚೇರಿಯಲ್ ಜಿಲ್ಲೆಯಲ್ಲಿ ಘಟನೆ ನಡೆದಿದೆ.
ಮದುವೆಯಾಗಿ ಗಂಡನ ಮನೆಯೊಳಗೆ ಕಾಲಿಟ್ಟ 5 ದಿನದಲ್ಲಿ ಈ ಘಟನೆ ನಡೆದಿದೆ. ವಾಟರ್ ಹೀಟರ್ ನಿಂದ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಮಂಚೇರಿಯಲ್ ಜಿಲ್ಲೆಯ ನೆನ್ನೆಲಾ ಮಂಡಲದ ನಿವಾಸಿಗಳಾದ ಸಿದ್ದು ಮತ್ತು ಜಂಬಿ ಸ್ವಪ್ನಾ ಪರಸ್ಪರ ಪ್ರೀತಿಸುತ್ತಿದ್ದರು, ಕುಟುಂಬ ಸದಸ್ಯರು ಮತ್ತು ಪೋಷಕರು ಮದುವೆಗೆ ಒಪ್ಪದ ಹಿನ್ನೆಲೆ ದಂಪತಿಗಳು ಐದು ದಿನಗಳ ಹಿಂದೆ ಬೆಲ್ಲಂಪಲ್ಲಿಯಲ್ಲಿ ಪ್ರೇಮ ವಿವಾಹವಾಗಿದ್ದರು. ಅತ್ತೆಯ ಮನೆಗೆ ಕಾಲಿಟ್ಟ ಸ್ವಪ್ನಾಗೆ ಸಿದ್ದು ಪೋಷಕರು ಭವ್ಯ ಸ್ವಾಗತ ನೀಡಿದರು. ಆದರೆ ನಂತರ ಸಂತೋಷ ಜಾಸ್ತಿ ದಿನ ಇರಲಿಲ್ಲ. ಸ್ವಪ್ನಾ ಸ್ನಾನ ಮಾಡುವಾಗ ವಿದ್ಯುತ್ ಪ್ರವಹಿಸಿದೆ ಎನ್ನಲಾಗಿದೆ.