ಬೆಳಗಾವಿ: ಬೆಳಗಾವಿಯ ಸುವರ್ಣಸೌಧದ ವಿಧಾನಸಭೆಯಲ್ಲಿ ಬಿಜೆಪಿ ಅವಧಿಯಲ್ಲಿ ಅಳವಡಿಸಿದ ಸ್ವಾತಂತ್ರ್ಯ ಹೋರಾಟಗಾರ ವಿನಾಯಕ ದಾಮೋದರ ಸಾವರ್ಕರ್ ಫೋಟೋ ತೆಗೆಯುವ ಕುರಿತಾದ ಪ್ರಶ್ನೆಗೆ ಸ್ಪೀಕರ್ ಯು.ಟಿ. ಖಾದರ್ ಪ್ರತಿಕ್ರಿಯೆ ನೀಡಿದ್ದಾರೆ.
ನಾವು ರಚನಾತ್ಮಕ ಮಾರ್ಗ ಅನುಸರಿಸುತ್ತೇವೆ ಹೊರತೂ ವಿನಾಶದ ಹಾದಿ ತುಳಿಯುವುದಿಲ್ಲ. ಸಕಾರಾತ್ಮಕ ಚಿಂತನೆಗಳಿಗೆ ಮಾತ್ರ ಅವಕಾಶವಿದೆ ಎಂದು ಹೇಳುವ ಮೂಲಕ ಭಾವಚಿತ್ರ ತೆಗೆಯುವುದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.
ಸಾವರ್ಕರ್ ಫೋಟೋವನ್ನು ಇಷ್ಟರಲ್ಲೇ ತೆಗೆಯಲಾಗುತ್ತದೆ ಎನ್ನುವ ಚರ್ಚೆ ನಡೆದಿತ್ತು. ಕಾಂಗ್ರೆಸ್ ನಲ್ಲಿಯೂ ಆಂತರಿಕವಾಗಿ ಸಾವರ್ಕರ್ ಫೋಟೋ ತೆಗೆಸುವ ಒತ್ತಡ ಇದೆ. ಸಾವರ್ಕರ್ ಫೋಟೋ ತೆಗೆದಿದ್ದೆ ಆದಲ್ಲಿ ಮಹಾರಾಷ್ಟ್ರದಲ್ಲಿನ ಸಾರ್ವತ್ರಿಕ ಚುನಾವಣೆ ಮೇಲೆ ಪರಿಣಾಮ ಬೀರಬಹುದೆಂಬ ಕಾರಣಕ್ಕೆ ಕಾಂಗ್ರೆಸ್ ಸುಮ್ಮನಿತ್ತು. ಇಂಡಿಯಾ ಒಕ್ಕೂಟದ ಮಿತ್ರ ಪಕ್ಷ ಶಿವಸೇನೆ ಸಾವರ್ಕರ್ ಪರ ಇದೆ. ಸಾವರ್ಕರ್ ಫೋಟೋ ತೆಗೆದರೆ ರಾಜಕೀಯ ಪರಿಣಾಮ ಬೀರಬಹುದೆಂಬ ಲೆಕ್ಕಚಾರವಿತ್ತು. ಇದೀಗ ಚುನಾವಣೆ ಮುಗಿದಿರುವುದಿರಂ ಫೋಟೋ ತೆಗೆಯಬಹುದು ಎಂಬ ಚರ್ಚೆ ನಡೆದಿತ್ತು.
ಆದರೆ, ಸ್ಪೀಕರ್ ಯು.ಟಿ. ಖಾದರ್ ಅವರು, ನಾವು ರಚನಾತ್ಮಕ ಮಾರ್ಗ ಅನುಸರಿಸುತ್ತೇವೆ ಹೊರತೂ ವಿನಾಶದ ಹಾದಿ ತುಳಿಯುವುದಿಲ್ಲ. ಸಕಾರಾತ್ಮಕ ಚಿಂತನೆಗಳಿಗೆ ಮಾತ್ರ ಅವಕಾಶವಿದೆ ಎಂದು ಹೇಳುವ ಮೂಲಕ ಭಾವಚಿತ್ರ ತೆಗೆಯುವುದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.