ಚಾಮರಾಜನಗರ: ಸೇತುವೆ ಮೇಲೆ ನಿಂತು ಹುಡುಗಾಟವಾಡಲು ಹೋಗಿ ವಿದ್ಯಾರ್ಥಿನಿಯೊಬ್ಬಳು ಕೆರೆಗೆ ಬಿದ್ದ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲದಲ್ಲಿ ನಡೆದಿದೆ.
ಕಾಲೇಜಿನ ವಿದ್ಯಾರ್ಥಿನಿಯರು, ಸೇತುವೆ ಮೇಲೆ ನಿಂತು ಹೋವನ್ನು ದೂರಕ್ಕೆ ಎಸೆಯುವ ಚಾಲೇಂಜ್ ಮಾಡಿದ್ದರು. ಚಾಲೇಂಜ್ ಸ್ವೀಕರಿಸಿ ಹೋವು ದೂರ ಎಸೆಯಲು ಯತ್ನಿಸಿದ ವಿದ್ಯಾರ್ಥಿನಿಯೊಬ್ಬಳು ಸೇತುವೆಯಿಂದ ಚಿಕ್ಕರಂಗನಾಥನ ಕೆರೆಗೆ ಬಿದ್ದಿದ್ದಾಳೆ. ಇದನ್ನು ಗಮನಿಸಿದ ಚಾಮರಾಜನಗರ ಯುನಿಟ್ ನ ಗೃಹರಕ್ಷಕ ಸಿಬ್ಬಂದಿ ಕೃಷ್ಣಮೂರ್ತಿ, ತಮ್ಮ ಪ್ರಾಣದ ಹಂಗು ತೊರೆದು ಕೆರೆಗೆ ಹಾರಿ ವಿದ್ಯಾರ್ಥಿನಿಯನ್ನು ರಕ್ಷಿಸಿದ್ದಾರೆ.
ವಿದ್ಯಾರ್ಥಿನಿ ನೀರಿನಲ್ಲಿ ಮುಳುಗದಂತೆ ಎಚ್ಚರವಹಿಸಿದ್ದಾರೆ. ಬಳಿಕ ಸ್ಥಳೀಯರ ಸಹಾಯದಿಂದ ವಿದ್ಯಾರ್ಥಿನಿಯನ್ನು ಮೇಲಕ್ಕೆತ್ತಲಾಗಿದೆ. ರಾಜಮ್ಮ ರಕ್ಷಿಸಲ್ಪಟ್ಟ ವಿದ್ಯಾರ್ಥಿನಿ. ಸದ್ಯ ವಿದ್ಯಾರ್ಥಿನಿ ಪ್ರಾಣಾಪಾಯದಿಂದ ಪಾರಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.