ಹೈದರಾಬಾದ್: ತೆಲಂಗಾಣದ ವನಪರ್ತಿ ಜಿಲ್ಲೆಯಲ್ಲಿ ಆಯೋಜಿಸಿದ್ದ ಸಿಎಂ ಕಪ್ ವಾಲಿಬಾಲ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿ ಮೈದಾನದಲ್ಲಿಯೇ ಕುಸಿದುಬಿದ್ದು ಮೃತಪಟ್ಟಿದ್ದಾನೆ.
ಸಾಯಿ ಪುನೀತ್(15) ಮೃತಪಟ್ಟ ವಿದ್ಯಾರ್ಥಿ. ಪೆದ್ದಮಂದಡಿ ಮಂಡಲದ ಬಲಿಜಪಲ್ಲಿ ಗ್ರಾಮದ ಜೆಡ್.ಪಿ.ಹೆಚ್.ಎಸ್. ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಪಾಮಿರೆಡ್ಡಿಪಲ್ಲಿ ಮುಂದಿರ ತಾಂಡಾದ 10ನೇ ತರಗತಿ ವಿದ್ಯಾರ್ಥಿ ಸಾಯಿ ಪುನೀತ್ ಭಾಗವಹಿಸಿದ್ದ.
ಪಂದ್ಯದ ವೇಳೆ ಏಕಾಏಕಿ ಕುಸಿತು ಬಿದ್ದ ಬಾಲಕನ್ನು ಶಾಲೆಯ ಸಿಬ್ಬಂದಿ ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಹೃದಯಘಾತದಿಂದ ಈ ಮೊದಲೇ ಬಾಲಕ ಮೃತಪಟ್ಟಿರುವುದಾಗಿ ಪರೀಕ್ಷಿಸಿದ ವೈದ್ಯರು ದೃಢಪಡಿಸಿದ್ದಾರೆ. ಮೃತನ ಕುಟುಂಬಕ್ಕೆ ನೆರವು ನೀಡುವಂತೆ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸಿವೆ.