ಬೆಂಗಳೂರು: ಬೆಂಗಳೂರಿನ ಅಪಾರ್ಟ್ ಮೆಂಟ್ ನಲ್ಲಿ ಬಾಡಿಗೆಗೆ ಇದ್ದ ಯುವತಿ ಮೇಲೆ ಅಪಾರ್ಟ್ ಮೆಂಟ್ ಮಾಲೀಕನ ಮಗ ಹಲ್ಲೆ ನಡೆಸಿ, ಎಳೆದಾಡಿರುವ ಘಟನೆ ಪ್ಲಾನೆಟ್ ವಿಸ್ತಾ ಅಪಾರ್ಟ್ ಮೆಂಟ್ ನಲ್ಲಿ ನಡೆದಿದೆ.
ಸಂಗೀತಾ ಗಂಭೀರವಾಗಿ ಹಲ್ಲೆಗೊಳಗಾಗಿರುವ ಯುವತಿ. ಡಿಸೆಂಬರ್ 3ರಂದು ರಾತ್ರಿ 10:30ಕ್ಕೆ ಪಾರ್ಸಲ್ ಪಡೆಯಲು ಯುವತಿ ಗೇಟ್ ಬಳಿ ಬಂದಿದ್ದಳು. ವೇಳೆ ಅಪಾರ್ಟ್ ಮೆಂಟ್ ಮಾಲೀಕನ ಮಗ ಮಂಜುನಾಥ್ ಗೌಡ ಎಂಬಾತ ಯುವತಿ ಮೇಲೆ ಹಲ್ಲೆ ನಡೆಸಿದ್ದಾನೆ. ಅಲ್ಲದೇ ಯುವತಿಯನ್ನು ಮನೆಯೊಳಗೆ ಎಳೆದೊಯ್ಯಲು ಯತ್ನಿಸಿದ್ದಾನೆ.
ಕುಡಿದ ಅಮಲಿನಲ್ಲ್ ಯುವತಿಯನ್ನು ಅವಾಚ್ಯವಾಗಿ ನಿಂದಿಸಿದ್ದಲ್ಲದೇ ಕೈ ಬೆರಳನ್ನು ಕಚ್ಚಿ ಗಾಯಗೊಳಿಸಿದ್ದಾನೆ. ಅಪಾರ್ಟ್ ಮೆಂಟ್ ನ ಹಲವು ನಿವಾಸಿಗಳು ಸ್ಥಳದಲ್ಲಿದ್ದರೂ ಯಾರೂ ಯುವತಿಯ ಸಹಾಯಕ್ಕೆ ಬಂದಿಲ್ಲ. ಆತನಿಂದ ತಪ್ಪಿಸಿಕೊಂಡು ಹೋಗುವಾಗ ಯುವತಿಗೆ ಇನ್ನಷ್ಟು ಬಲವಾಗಿ ಹೊಡೆದಿದ್ದಾನೆ. ಘಟನೆ ಬಳಿಕ ಮಾರನೆ ದಿನ ಮನೆ ಕಿಟಕಿಯಿಂದ ಇಣುಕಿ ನೋಡಿ ಕಿರುಕುಳವನ್ನೂ ನೀಡಿದ್ದಾಗ್ ಯುವತಿ ಆರೋಪಿಸಿದ್ದಾರೆ.
ಯುವತಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಸಂಜಯ ನಗರ ಠಾಣೆ ಪೊಲೀಸರು ಆರೋಪಿ ಮಂಜುನಾಥ್ ಗೌಡನನ್ನು ಬಂಧಿಸಿದ್ದಾರೆ.