ಮಂಡ್ಯ: ಮಂಡ್ಯದಲ್ಲಿ ಡಿಸೆಂಬರ್ 20 ರಿಂದ 22 ರವರೆಗೆ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ನಿಷೇಧ ವಿವಾದ ಉಂಟಾಗಿದೆ.
ಸಮ್ಮೇಳನದಲ್ಲಿ ಮಾಂಸಾಸಹಾರ ನಿಷೇಧ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತವಾಗಿದೆ. ಮಾಂಸಾಹಾರಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಸ್ಯಾಹಾರ ಮತ್ತು ಮಾಂಸಾಹಾರ ಎರಡನ್ನು ನೀಡುವಂತೆ ಒತ್ತಾಯಿಸಿದ್ದಾರೆ. ಆಹಾರ ತಾರತಮ್ಯ ಮಾಡದಂತೆ ಸಚಿವ ಚಲುವರಾಯಸ್ವಾಮಿಯವರಿಗೆ ಮನವಿ ಮಾಡಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತು ಮಾಂಸಹಾರ, ಮದ್ಯ ಮತ್ತು ತಂಬಾಕು ಮಾರಾಟವನ್ನು ನಿಷೇಧಿಸಲಾಗಿದೆ ಎನ್ನುವ ನಿಯಮ ವಿಧಿಸಿದೆ. ಸಾಹಿತ್ ಸಮ್ಮೇಳನ ಸಸ್ಯಾಹಾರಿಗಳಿಗೆ ಮಾತ್ರವೇ? ಮಾಂಸಾಹಾರ ಏಕೆ ನೀಡುವುದಿಲ್ಲ ಇದು ಮಡಿ ಸಾಹಿತ್ಯ ಸಮ್ಮೇಳನ ಎಂದೆಲ್ಲ ಮಾಂಸಾಹಾರಿಗಳು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮಹೇಶ್ ಜೋಶಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭುವನೇಶ್ವರಿ ಪೂಜಿಸುವ ಜಾಗದಲ್ಲಿ ಮಾಂಸಹಾರಕ್ಕೆ ಅವಕಾಶವಿಲ್ಲವೆಂದು ಕನ್ನಡ ಸಾಹಿತ್ಯ ಪರಿಷತ್ತು ಪದಾಧಿಕಾರಿಗಳು ಹೇಳಿದ್ದಾರೆ.