ಕಲಬುರಗಿ: ಕಲಬುರಗಿ ಕೇಂದ್ರ ಕಾರಾಗೃಹದಿಂದ ನಟೋರಿಯಸ್ ಕೈದಿಗಳನ್ನು ಸ್ಥಳಾಂತರ ಮಾಡಿದ ಬೆನ್ನಲ್ಲೇ ಕೈದಿಗಳು ಜೈಲಿನಲ್ಲಿ ಎಣ್ಣೆ ಪಾರ್ಟಿ ಮಾಡುತ್ತಿರುವ ಹಳೇ ವಿಡಿಯೋವನ್ನು ಹರಿಬಿಟ್ಟಿದ್ದು, ಭಾರಿ ವೈರಲ್ ಆಗಿದೆ.
ಕಲಬುರಗಿ ಜೈಲಿನಲ್ಲಿದ್ದ ಶಂಕಿತ ಉಗ್ರ ಜುಲ್ಫಿಕರ್, ಸಿವಮೊಗ್ಗ ರೌಡಿಶಿಟರ್ ಬಚ್ಚನ್ ಸೇರಿದಂತೆ 6 ಕೈದಿಗಳನ್ನು ನಿನ್ನೆಯಷ್ಟೇ ವಿವಿಧ ಜೈಲುಗಳಿಗೆ ಸ್ಥಳಾಂತರ ಮಾಡಲಾಗಿತ್ತು. ಇದರ ಬೆನ್ನಲ್ಲೇ ಕಲಬುರಗಿ ಜೈಲಿನ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಆದರೆ ಇದು ಎರಡು ತಿಂಗಳ ಹಳೆ ವಿಡಿಯೋ ಎನ್ನಲಾಗಿದೆ.
ಜೈಲಿನಲ್ಲಿ ರಾಶಿ ರಾಶಿ ಸ್ಮಾರ್ಟ್ ಫೋನ್ ಗಳು, ಬೀಡಿ-ಸಿಗರೇಟ್ ಪ್ಯಾಕೇಟ್ ಗಳು ಒಂದೆಡೆ ಇರುವ ವಿಡಿಯೋ ಹಾಗೂ ಜೈಲಿನಲ್ಲಿಯೇ ಕೈದಿಗಳು ಎಣ್ಣೆ ಪಾರ್ಟಿ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.
ಜೈಲಿನ ಅಧೀಕ್ಷಕಿಯನ್ನು ಟಾರ್ಗೆಟ್ ಮಾಡಿಕೊಂಡು ವಿಡಿಯೋ ರಿಲೀಸ್ ಮಾಡಲಾಗಿದೆ ಎನ್ನಲಾಗಿದೆ. ಅ.14ರಂದು ಜೈಲು ಮುಖ್ಯ ಅಧೀಕ್ಷಕಿಯಾಗಿ ಡಾ.ಅನಿತಾ ಅಧೀಕಾರ ಸ್ವೀಕರಿಸಿದ್ದಾರೆ. ಅ.16ರಿಂದ ಜೈಲಿನಲ್ಲಿ ಕಟ್ಟುನಿಟ್ಟಿನ ನಿಯಮ ಜಾರಿಗೆ ಬಂದಿದೆ. ಕೈದಿಗಳ ರಾಜಾತಿಥ್ಯಕ್ಕೆ ಕಡಿವಾಣ ಬಿದ್ದಿದೆ. ಇದರಿಂದ ರೊಚ್ಚಿಗೆದ್ದಿದ್ದ ಕೈದಿಗಳು ಜೈಲಿನಲ್ಲಿಯೇ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ನಟೋರಿಯಸ್ ಕೈದಿಗಳನ್ನು ಸ್ಥಳಾಂತರ ಅಮಡಲಾಗಿತ್ತು. ಇದೀಗ ಕೈದಿಗಳು ಹಳೇ ವಿಡಿಯೋವನ್ನು ವೈರಲ್ ಮಡುವ ಮೂಲಕ ಅಧೀಕ್ಷಕಿಯನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎನ್ನಲಾಗಿದೆ.