
ಹುಬ್ಬಳ್ಳಿ: “ಇನ್ಮೇಲೆ ನಾನು ಸೈಲೆಂಟ್, ರಮೇಶ್ ಜಾರಕಿಹೊಳಿ ವೈಲೆಂಟ್ ಅಗಲಿದ್ದಾರೆ. ನಾನು ಸದ್ಯಕ್ಕೆ ಸೈಲೆಂಟ್ ಆಗುತ್ತೇನೆ. ಮುಂದೆ ಒಬ್ಬೊಬ್ಬರಾಗಿಯೇ ವೈಲೆಂಟ್ ಆಗುತ್ತಾ ಹೋಗುತ್ತೇವೆ. ಆ ರೀತಿಯ ಪ್ಲಾನ್ ಹಾಕಿಕೊಂಡಿದ್ದೇವೆ. ನನ್ನ ಮೇಲೆ ಪಕ್ಷದ ಹೈಕಮಾಂಡ್ ಗೆ ಯಾವಾಗಲೂ ಪ್ರೀತಿ. ನನ್ನ ವಿರುದ್ಧ ಶಿಸ್ತು ಕ್ರಮದ ಪ್ರಶ್ನೆಯೇ ಇಲ್ಲ.”
ಹೀಗೆಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಪಕ್ಷದ ಹೈಕಮಾಂಡ್ ಒಳ್ಳೆಯ ಕೆಲಸ ಮಾಡಲು ಹೇಳಿದೆ. ನನಗೆ ಮುಂದೆ ಒಳ್ಳೆಯ ಭವಿಷ್ಯವಿದೆ ಎಂದು ಕೂಡ ಹೇಳಿದ್ದಾರೆ. ಯತ್ನಾಳ್ ಅವರನ್ನು ಮುಗಿಸುತ್ತೇನೆ ಎನ್ನುವರಿಂದ ಏನೂ ಆಗುವುದಿಲ್ಲ. ಯಾರಿಂದಲೂ ನನಗೆ ಏನೂ ಮಾಡಲು ಆಗಲ್ಲ. ಯಾರ್ಯಾರು ಉತ್ತರ ಕೊಡುತ್ತಾರೋ ನೋಡೋಣ ಎಂದು ಹೇಳಿದ್ದಾರೆ.
ನನಗೆ ಪರ್ಮನೆಂಟಾಗಿ ಸೈಲೆಂಟಾಗಿರಲು ಹೇಳಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಮುಂದುವರೆಸುತ್ತೇನೆ. ವಿಜಯೇಂದ್ರ ಸೇರಿ ನಮ್ಮ ನಾಯಕರ ವಿರುದ್ಧ ಗುಪ್ತ ಪತ್ರಗಳನ್ನು ನಮ್ಮ ಟಾರ್ಗೆಟ್ ವಿಜಯೇಂದ್ರ ಅಲ್ಲ, ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವುದೇ ನಮ್ಮ ಟಾರ್ಗೆಟ್. ಬಿಜೆಪಿ ಅಧಿಕಾರಕ್ಕೆ ತಂದು ಪ್ರಾಮಾಣಿಕರನ್ನು ಮುಖ್ಯಮಂತ್ರಿ ಮಾಡುವ ಗುರಿ ನಮ್ಮದು. ಭ್ರಷ್ಟರು ಮುಖ್ಯಮಂತ್ರಿ ಆಗಬಾರದು ಎಂಬ ಉದ್ದೇಶವಿದೆ ಎಂದು ಹೇಳಿದ್ದಾರೆ.