alex Certify BIG NEWS: ಕೇವಲ ಒಂದು ತಿಂಗಳಲ್ಲಿ 79 ಲಕ್ಷ ಗ್ರಾಹಕರನ್ನು ಕಳೆದುಕೊಂಡ ʼಜಿಯೋʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೇವಲ ಒಂದು ತಿಂಗಳಲ್ಲಿ 79 ಲಕ್ಷ ಗ್ರಾಹಕರನ್ನು ಕಳೆದುಕೊಂಡ ʼಜಿಯೋʼ

ಬಿಲಿಯನೇರ್ ಮುಖೇಶ್ ಅಂಬಾನಿ ನೇತೃತ್ವದ ಭಾರತದ ಅತಿದೊಡ್ಡ ಟೆಲಿಕಾಂ ಪೂರೈಕೆದಾರ ರಿಲಯನ್ಸ್ ಜಿಯೋ ಭಾರೀ ಹಿನ್ನಡೆ ಎದುರಿಸಿದೆ. ಜಿಯೋ ಕಂಪನಿಯು ಕೇವಲ ಒಂದು ತಿಂಗಳಲ್ಲಿ 7.9 ಮಿಲಿಯನ್ (79 ಲಕ್ಷ) ಚಂದಾದಾರರನ್ನು ಕಳೆದುಕೊಂಡಿದೆ. ಲಕ್ಷಾಂತರ ಬಳಕೆದಾರರು ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಚಂದಾದಾರಿಕೆಗೆ ಬದಲಾಗಿದ್ದರಿಂದ ಈ ತೀವ್ರ ಕುಸಿತ ಕಂಡುಬಂದಿದೆ.

ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ದ ಮಾಹಿತಿಯ ಪ್ರಕಾರ ಖಾಸಗಿ ಟೆಲಿಕಾಂ ಪೂರೈಕೆದಾರರು ಒಟ್ಟಾರೆಯಾಗಿ ಸುಮಾರು 10 ಮಿಲಿಯನ್ (1 ಕೋಟಿ) ಚಂದಾದಾರರನ್ನು ಸೆಪ್ಟೆಂಬರ್ 2024 ರಲ್ಲಿ ಕಳೆದುಕೊಂಡಿದ್ದಾರೆ. ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ, 7.9 ಮಿಲಿಯನ್ ಬಳಕೆದಾರರನ್ನು ಕಳೆದುಕೊಂಡು ದೊಡ್ಡ ಕುಸಿತವನ್ನು ಕಂಡಿದೆ. ಸುನಿಲ್ ಮಿತ್ತಲ್ ಅವರ ಭಾರ್ತಿ ಏರ್‌ಟೆಲ್ 1.4 ಮಿಲಿಯನ್ ಚಂದಾದಾರರನ್ನು ಕಳೆದುಕೊಂಡರೆ Vi (ವೋಡಾಫೋನ್-ಐಡಿಯಾ) 1.5 ಮಿಲಿಯನ್ ಗ್ರಾಹಕರ ಕುಸಿತ ಕಂಡಿದೆ.

ಖಾಸಗಿ ಟೆಲಿಕಾಂ ಕಂಪನಿಗಳು ಚಂದಾದಾರರ ನಷ್ಟವನ್ನು ಎದುರಿಸುತ್ತಿರುವಂತೆ, BSNL ಬಲವಾದ ಪುನರಾಗಮನ ಮಾಡಿದೆ. ಜುಲೈ ಮತ್ತು ಅಕ್ಟೋಬರ್ 2024 ರ ನಡುವೆ, ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ 5.5 ಮಿಲಿಯನ್ (55 ಲಕ್ಷ) ಹೊಸ ಬಳಕೆದಾರರನ್ನು ಗಳಿಸಿದೆ. ಇದು ಅನೇಕರಿಗೆ ಉನ್ನತ ಆಯ್ಕೆಯಾಗಿ ತನ್ನ ಸ್ಥಾನವನ್ನು ಗಟ್ಟಿಗೊಳಿಸಿಕೊಂಡಿದೆ.

ದೂರಸಂಪರ್ಕ ಇಲಾಖೆಯ (DoT) ದತ್ತಾಂಶವು ಜಿಯೋ, ವಿಐ ಮತ್ತು ಏರ್ ಟೆಲ್ ನಂತಹ ಖಾಸಗಿ ಪೂರೈಕೆದಾರರಿಂದ BSNL ಗೆ ಚಂದಾದಾರರ ಗಮನಾರ್ಹ ಬದಲಾವಣೆಯನ್ನು ತೋರಿಸುತ್ತದೆ. ಜುಲೈ 2024 ರಲ್ಲಿ 1.5 ಮಿಲಿಯನ್ ಬಳಕೆದಾರರು BSNL ಗೆ ತಮ್ಮ ಚಂದಾದಾರಿಕೆ ಬದಲಿಸಿಕೊಂಡಿದ್ದು ಈ ಮೂಲಕ ಆಗಸ್ಟ್ ನಲ್ಲಿ ಚಂದಾದಾರರ ಸಂಖ್ಯೆ 2.1 ಮಿಲಿಯನ್‌ಗೆ ಏರಿತು. ಈ ಏರಿಕೆ ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ಮುಂದುವರೆದು ಅನುಕ್ರಮವಾಗಿ 1.1 ಮಿಲಿಯನ್ ಮತ್ತು 0.7 ಮಿಲಿಯನ್ ಚಂದಾದಾರರು ಬಿಎಸ್ಎನ್ಎಲ್ ಗೆ ಬದಲಾದರು.

ಜೂನ್ 2024 ರಲ್ಲಿ ಖಾಸಗಿ ಟೆಲಿಕಾಂ ಪೂರೈಕೆದಾರರ ರೀಚಾರ್ಜ್ ಸುಂಕದ ಹೆಚ್ಚಳದಿಂದ ಬಳಕೆದಾರರು ಅಸಮಾಧಾನ ವ್ಯಕ್ತಪಡಿಸಿ ತಮ್ಮ ಚಂದಾದಾರಿಕೆಯನ್ನು ಬೇರೆ ಟೆಲಿಕಾಂ ಪೂರೈಕೆದಾರರಿಗೆ ಬದಲಿಸಿಕೊಂಡರು. ಇದಕ್ಕೂ ಮೊದಲು ಹೆಚ್ಚಿನ ಬಳಕೆದಾರರು ಖಾಸಗಿ ಆಪರೇಟರ್‌ಗಳಿಗಾಗಿ ಬಿಎಸ್ಎನ್ಎಲ್ ಅನ್ನು ತೊರೆಯುತ್ತಿದ್ದರು. ಆದಾಗ್ಯೂ ರೀಚಾರ್ಜ್ ಸುಂಕದ ಹೆಚ್ಚಳದ ನಂತರ ಬಿಎಸ್ಎನ್ಎಲ್ ಗ್ರಾಹಕರ ವಲಸೆ ನಿಧಾನವಾಗಿ ಕಡಿಮೆಯಾಯಿತು.

ಬಿಎಸ್ಎನ್ಎಲ್, ಮುಕೇಶ್ ಅಂಬಾನಿಯವರ ರಿಲಯನ್ಸ್ ಜಿಯೋ ಮತ್ತು ಸುನಿಲ್ ಮಿತ್ತಲ್ ಅವರ ಏರ್‌ಟೆಲ್‌ಗೆ ಕಠಿಣ ಸ್ಪರ್ಧೆಯನ್ನು ನೀಡುತ್ತಿದೆ. ಕೇಂದ್ರ ಟೆಲಿಕಾಂ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ BSNL ನ ಪುನರುಜ್ಜೀವನ ಮತ್ತು ಬೆಳವಣಿಗೆಯನ್ನು ಶ್ಲಾಘಿಸಿದ್ದಾರೆ.

ಏತನ್ಮಧ್ಯೆ, BSNL ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಬರ್ಟ್ ರವಿ , ಮುಂದಿನ ದಿನಗಳಲ್ಲಿ ತನ್ನ ಸುಂಕವನ್ನು ಹೆಚ್ಚಿಸುವ ಯಾವುದೇ ಯೋಜನೆಯನ್ನು ಹೊಂದಿಲ್ಲ ಎಂದು ಖಚಿತಪಡಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...