ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ-ಮುಡಾ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಪ್ರಕರಣ ಬಯಲಾಗಿದೆ.
ಚಾಮುಂಡಿ ನಗರ ಸರ್ವೋದಯ ಸಂಘದ ಸದಸ್ಯರಿಗೆ ನೀಡಲಾಗಿರುವ ನಿವೇಶಗಳನ್ನು ಕಯಪತ್ರ ಮಾಡುವ ಮೊದಲೇ ಮಾರಾಟ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಕ್ರಯಪತ್ರ ಮಾಡುವ ಮೊದಲೇ ಸೇಲ್ ಅಗ್ರಿಮೆಂಟ್ ಮಾಡಿಕೊಟ್ಟಿರುವ ಆರೋಪ ಕೇಳಿಬಂದಿದ್ದು, ಇದರಲ್ಲಿ ಹಲವು ಅಧಿಕಾರಿಗಳು ಭಾಗಿಯಾಗಿದ್ದಾರೆ ಎನ್ನಲಾಗಿದೆ.
ಚಾಮುಂಡಿ ನಗರ ಸರ್ವೋದಯ ಸಂಘದ ಸದಸ್ಯರು 17 ಎಕರೆ ಪ್ರದೇಶದಲ್ಲಿ 48 ನಿವೇಶನಗಳು ನಮ್ಮದು ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಮುಡಾ ಅಧಿಕಾರಿಗಳು ಈ 17 ಎಕರೆ ಪ್ರದೇಶಗಳನ್ನು ರೈತರಿಂದ ನೇರವಾಗಿ ಖರೀದಿಸಲಾಗಿದೆ ಎಂದು ಕೋರ್ ಗೆ ತಿಳಿಸಿದ್ದರು. ಬಳಿಕ ಕೋರ್ಟ್ ಮಾನವೀಯ ದೃಷ್ಟಿಯಿಂದ ಸಂಘದ ಸದಸ್ಯರನ್ನು ಪರಿಗಣಿಸಿ ಈ ಬಗ್ಗೆ ಸರ್ಕಾರದೊಂದಿಗೆ ಚರ್ಚಿಸಿ ಮುಡಾಗೆ ಸೂಚನೆ ನೀಡಿತು. ಬಳಿಕ ಮುಡಾ ಸಂಘದ ಸದಸ್ಯರಿಗೆ ನಿವೇಶನ ನೀಡಲು ನಿರ್ಧರಿಸಿ, ಅದರಂತೆ ಸಂಘದ ಸದಸ್ಯರಿಗೆ ಕ್ರಯ ಪತ್ರ ಮಾಡಿಕೊಡುತ್ತದೆ. ಆದರೆ ಸಂಘದ ಸದಸ್ಯರು ಕ್ರಯ ಪತ್ರ ಆಗುವ ಒಂದು ತಿಂಗಳ ಮುನ್ನವೇ ಬೇರೊಬ್ಬರಿಗೆ ಸೇಲ್ ಅಗ್ರಿಮೆಂಟ್ ಕೊಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ.