ಬಳ್ಳಾರಿ : ರಾಜ್ಯ ಸರ್ಕಾರವು ರಾಜ್ಯದ ಎಲ್ಲ ಬಡ ಕುಟುಂಬಗಳ ಮನೆಯ ಯಜಮಾನಿಗೆ ಮಾಸಿಕ 2000 ರೂಪಾಯಿ ಸಹಾಯಧನ ನೀಡುವ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದು, ಸಂಕಷ್ಟದಲ್ಲಿದ್ದವರಿಗೆ ನೆರವಾಗುವುದು, ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸುವುದು ಯೋಜನೆಯ ಆಶಯವಾಗಿದ್ದು, ಮಹಿಳಾ ಕೂಲಿ ಕಾರ್ಮಿಕರು, ಬಡ ಕುಟುಂಬದ ಮಹಿಳೆಯರಿಗೆ ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯು ಆಸರೆಯಾಗಿದೆ.
ಮಕ್ಕಳ ಶಾಲೆ ಶುಲ್ಕ, ವೈದ್ಯಕೀಯ ಖರ್ಚು, ದಿನಸಿ ಖರೀದಿ ಹೀಗೆ ನಾನಾ ರೀತಿಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಮನೆಯ ಯಜಮಾನಿಗೆ ಪ್ರತಿ ತಿಂಗಳು ನೀಡುವ ರೂ.2000 ಸದ್ಬಳಕೆಯಾಗುತ್ತಿದೆ. ಇದರೊಂದಿಗೆ ಕೆಲ ಮಹಿಳೆಯರು ಸ್ವಂತ ವ್ಯಾಪಾರ, ಹೊಲಿಗೆ ಯಂತ್ರ ಖರೀದಿ, ಬಳೆ ಅಂಗಡಿ ವ್ಯಾಪಾರ, ಬ್ಯೂಟಿ ಪಾರ್ಲರ್ ಆರಂಭಿಸಿ ಗೃಹಲಕ್ಷ್ಮಿ ಯೋಜನೆಯ ಸದುಯೋಗ ಪಡೆದುಕೊಂಡಿದ್ದಾರೆ.
2023 ಆಗಸ್ಟ್ 30 ರಂದು ಯೋಜನೆಗೆ ಯುವಜನ ಸೇವೆ, ಕ್ರೀಡಾ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಬಿ.ನಾಗೇಂದ್ರ ಅವರು ಚಾಲನೆ ನೀಡಿದ್ದರು. ನೋಂದಾಯಿಸಿಕೊಂಡ ಗೃಹಿಣಿಯರಿಗೆ ಮಾಸಿಕ 2 ಸಾವಿರ ರೂಪಾಯಿ ನೀಡುತ್ತಾ ಬಂದಿತ್ತು. ಈವರೆಗೂ 13 ತಿಂಗಳ ಸಹಾಯಧನ ಫಲಾನುಭವಿಗಳಿಗೆ ತಲುಪಿದೆ. ಇಲ್ಲಿಯವರೆಗೂ ಯೋಜನೆಗೆ 67724.88 ಕೋಟಿ ರೂ. ವೆಚ್ಚವಾಗಿದೆ.
*ಎಷ್ಟು ಮಂದಿ ನೋಂದಣಿ?
ಈ ಯೋಜನೆಗೆ ಇಲ್ಲಿಯವರೆಗೂ ಜಿಲ್ಲೆಯಲ್ಲಿ 2,91,526 ಗೃಹಿಣಿಯರು ನೋಂದಣಿ ಮಾಡಿಸಿದ್ದಾರೆ. ಗ್ರಾಮ ಒನ್, ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಈಗಲೂ ಅರ್ಹ ಫಲಾನುಭವಿಗಳಿಗೆ ನೋಂದಣಿಗೆ ಅವಕಾಶ ಇದೆ. ರೇಷನ್ ಕಾರ್ಡ್ ಹೊಂದಿರುವ ತೆರಿಗೆ ಪಾವತಿ ಮಾಡದ ಕುಟುಂಬದ ಯಜಮಾನಿಯರು ನೋಂದಣಿ ಮಾಡಬಹುದು.
ಯಾವ ತಿಂಗಳು ಎಷ್ಟು ಪಾವತಿ?
ಆಗಸ್ಟ್ – 4822.76 ಕೋಟಿ ರೂ.
ಸೆಪ್ಟೆಂಬರ್ – 5103.22 ಕೋಟಿ ರೂ.
ಅಕ್ಟೋಬರ್ – 5161.18 ಕೋಟಿ ರೂ.
ನವೆಂಬರ್ – 5212.98 ಕೋಟಿ ರೂ.
ಡಿಸೆಂಬರ್ – 5252.28 ಕೋಟಿ ರೂ.
ಜನವರಿ – 5011.46 ಕೋಟಿ ರೂ.
ಫೆಬ್ರವರಿ – 5422.84 ಕೋಟಿ ರೂ.
ಮಾರ್ಚ್ – 5551.50 ಕೋಟಿ ರೂ.
ಏಪ್ರಿಲ್ – 3703.04 ಕೋಟಿ ರೂ.
ಮೇ – 5574.66 ಕೋಟಿ
ಜೂನ್ – 5625.02 ಕೋಟಿ ರೂ.
ಜುಲೈ – 5638.50 ಕೋಟಿ ರೂ.
ಆಗಸ್ಟ್ – 5645.44 ಕೋಟಿ ರೂ.
ಒಟ್ಟು – 677,24,88,000 ಕೋಟಿ ರೂ.