ಕೇಂದ್ರೀಯ ಸೈನಿಕ ಮಂಡಳಿಯಲ್ಲಿ ಪೆನುರಿ ಅನುದಾನ, 100% ಅಂಗವಿಕಲ ಮಕ್ಕಳ ಅನುದಾನ ಹಾಗೂ ಅನಾಥ ಮಕ್ಕಳ ಅನುದಾನಕ್ಕಾಗಿ ಅರ್ಜಿ ಸಲ್ಲಿಸಿರುವ ಫಲಾನುಭವಿಗಳು 2024-25ನೇ ಸಾಲಿನ ಅನುದಾನ ನವೀಕರಣಕ್ಕಾಗಿ ಜೀವಿತ ಪ್ರಮಾಣ ಪತ್ರವನ್ನು ದಿ :01/122024 ರಿಂದ ದಿ :31/03/2025 ರೊಳಗಾಗಿ ಸಲ್ಲಿಸಬೇಕಾಗಿದ್ದು, ಜೀವಿತ ಪ್ರಮಾಣ ಪತ್ರವನ್ನು ಸಲ್ಲಿಸಲು ಮೂಲ ದಾಖಲೆಗಳೊಂದಿಗೆ ಸಂಬಂಧಿತ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಕಛೇರಿಗೆ ಭೇಟಿ ನೀಡಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕ ಡಾ.ಸಿ.ಎ.ಹಿರೇಮಠರವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಕೇಂದ್ರೀಯ ಸೈನಿಕ ಮಂಡಳಿಯ ಜಾಲತಾಣ HTTPS://ONLINE.KSB.GOV.IN ವನ್ನು ಅಥವಾ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಶಿವಮೊಗ್ಗ ಇವರ ದೂರವಾಣಿ ಸಂಖ್ಯೆ 08182-220925 ಯನ್ನು ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ.