ಥಾಣೆ: ಮಹಾರಾಷ್ಟ್ರದ ಹಂಗಾಮಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಯಾವುದೇ ಸುಧಾರಣೆಯಾಗದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಚಿಕಿತ್ಸೆ ನೀಡಿದ ಬಳಿಕ ಥಾಣೆಯ ಜುಪಿಟರ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.
ಮೂಲಗಳ ಪ್ರಕಾರ, ವೈದ್ಯರು ಅವರ ಆರೋಗ್ಯದ ಸಂಪೂರ್ಣ ಪರೀಕ್ಷೆಗೆ ಸಲಹೆ ನೀಡಿದ್ದರು. ಶಿಂಧೆ ಕಳೆದ ವಾರದಿಂದ ಗಂಟಲು ಸೋಂಕು ಮತ್ತು ಜ್ವರದಿಂದ ಬಳಲುತ್ತಿದ್ದರು. ವಿಶ್ರಾಂತಿ ಪಡೆಯಲು ವೈದ್ಯರ ಸಲಹೆಯ ಮೇರೆಗೆ ಶಿಂಧೆ ತಮ್ಮ ಎಲ್ಲಾ ಕೆಲಸಗಳನ್ನು ರದ್ದುಗೊಳಿಸಿದ್ದರು.