ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಬಣ ಬಡಿದಾಟ ಜೋರಾಗಿದೆ. ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬಣ ಹಾಗೂ ಶಾಸಕ ಯತ್ನಾಳ್ ಬಣಗಳಿಂದ ಪ್ರತ್ಯೇಕ ಹೋರಾಟ, ರಾಜಕೀಯ ಕಿತ್ತಾಟಗಳು ಆರಂಭವಾಗಿವೆ. ಈ ನಡುವೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ರಾಜ್ಯಕ್ಕೆ ಆಗಮಿಸಿದ್ದಾರೆ.
ಬೆಂಗಳೂರಿಗೆ ಆಗಮಿಸಿರುವ ತರುಣ್ ಚುಗ್ ಅವರನ್ನು ಭೇಟಿಯಾದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ತರುಣ್ ಚುಗ್ ಆಗಮಿಸಿರುವುದು ಬಿಜೆಪಿ ಆಂತರಿಕ ಸಂಘರ್ಷದ ಅಭಿಪ್ರಾಯ ಸಂಘ್ರಹಿಸಲು ಅಲ್ಲ ಎಂದು ತಿಳಿಸಿದ್ದಾರೆ.
ಕರ್ನಾಟಕ ಸೇರಿದಂತೆ ದೇಶಾದ್ಯಂತ ಬಿಜೆಪಿ ಸಂಘಟನಾ ಪರ್ವ ಆರಂಭವಾಗಿದೆ. ಸದಸ್ಯತ್ವ ಅಭಿಯಾನ, ಜಿಲ್ಲಾ ಮಂಡಲ ಸದಸ್ಯರ ನೇಮಕ ಪ್ರಕ್ರಿಯೆ ನಡೆಯುತ್ತಿಇದೆ. ಹಿನ್ನೆಲೆಯಲ್ಲಿ ತರುಣ್ ಚುಗ್ ಬೆಂಗಳೂರಿಗೆ ಬಂದಿದ್ದಾರೆ ಪಕ್ಷದ ಕಚೇರಿಯಲ್ಲಿ ಇಡೀ ದಿನ ಸಂಘಟನಾ ಸಭೆಗಳು ನಡೆಯಲಿವೆ. ಇದು ಬಿಟ್ಟರೆ ರಾಜಕೀಯ ವಿಚಾರ ಅಥವಾ ಇನ್ನಾವುದೇ ಚರ್ಚೆಗಳು ಇಲ್ಲ ಎಂದು ಸಷ್ಟಪಡಿಸಿದರು.
ಪಕ್ಷದ ಆಂತರಿಕ ವಿಚಾರದ ಚರ್ಚೆ ಇದ್ದರೆ ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ಆಗಮಿಸುತ್ತಿದ್ದರು. ತರುಣ್ ಚುಗ್ ಬಂದಿರುವುದು ಪಕ್ಷ ಸಂಘಟನೆ ದೃಷ್ಟಿಯಿಂದ ಎಂದು ತಿಳಿಸಿದರು.