ಬೆಂಗಳೂರು: ಫೆಂಗಲ್ ಚಂಡಮಾರುತದ ಪರಿಣಾಮ ರಾಜ್ಯದ ಹಲವು ಜಿಲ್ಲೆಗಳಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅವಾಂತರಗಳು ಸೃಷ್ಟಿಯಾಗಿವೆ.
ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೆಲವೆಡೆ ಮನೆ ಕುಸಿದು ಬಿದ್ದುವೆ. ಇನ್ನ ಹಲೆಡೆ ಮನೆಗಳಿಗೆ ನೀರು ನುಗ್ಗಿ ಅವಾಂತರಗಳು ಸೃಷ್ಟಿಯಾಗಿವೆ. ಹಲವೆಡೆ ರಸ್ತೆಗಳ ಮೇಲೆ ಚರಂಡಿ ನೀರು ನದಿಯಂತೆ ಹರಿಯುತ್ತಿದ್ದು, ವಾಹನ ಸಂಚಾರಕ್ಕೆ ಸಂಕಷ್ಟ ತಂದೊಡ್ಡಿದೆ. ಈ ನಡುವೆ ಭಾರಿ ಮಳೆಯಿಂದಾಗಿ ಬಿಡದಿ-ಮಾಗಡಿ ತಾತ್ಕಾಲಿಕ ಸೇತುವೆಯೇ ಬಿರುಕುಬಿಟ್ಟಿದೆ.
ಎಡೆಬಿಡದೇ ಸುರಿದ ಮಳೆಯಿಂದಾಗಿ ತಾತ್ಕಾಲಿಕ ಸೇತುವೆ ಬಿರುಕು ಬಿಟ್ಟಿದ್ದು, ಆತಂಕವನ್ನುಂಟುಮಾಡಿದೆ. ಎರಡು ವರ್ಷಗಳ ಹಿಂದೆ ಬಿಡದಿ-ಮಾಗಡಿ ಸೇತುವೆ ಕೊಚ್ಚಿ ಹೋಗಿತ್ತು. ಬಳಿಕ ಅಧಿಕಾರಿಗಳು ತಾತ್ಕಾಲಿಕ ಸೇತುವೆ ನಿರ್ಮಿಸಿದ್ದರು. ಈಗ ಫೆಂಗಲ್ ಎಫೆಕ್ಟ್ ನಿಂದಾಗಿ ತಾತ್ಕಾಲಿಕ ಸೇತುವೆ ಬಿರುಕುಬಿಟ್ಟಿದೆ.