ಬೆಳಗಾವಿ: ತಮ್ಮೊಂದಿಗೆ ನಿಲ್ಲುವಂತೆ ಹಿಂದುಳಿದ ಮತ್ತು ಪರಿಶಿಷ್ಟ ನಾಯಕರಿಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬೆದರಿಕೆ ಹಾಕಿದ್ದಾರೆ ಎಂದು ಪಕ್ಷದ ಶಾಸಕ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ವಿಜಯೇಂದ್ರ ಜೊತೆಯಲ್ಲಿರುವ ಬಹುತೇಕರು ಹಿಂದುಳಿದ ಸಮುದಾಯದವರೇ ಹೊರತೂ ಲಿಂಗಾಯಿತ, ಒಕ್ಕಲಿಗರು ಇಲ್ಲ. ರಾಜ್ಯಾಧ್ಯಕ್ಷ ಸ್ಥಾನ ನಿಭಾಯಿಸುವ ಸಾಮರ್ಥ್ಯ ವಿಜಯೇಂದ್ರರಿಗೆ ಇಲ್ಲ. ಅವರನ್ನು ಬದಲಾವಣೆ ಮಾಡಲೇಬೇಕು ಎಂದು ಆಗ್ರಹಿಸಿದ್ದಾರೆ.
ಯಡಿಯೂರಪ್ಪ ಹುಟ್ಟು ಹೋರಾಟಗಾರ. ಅವರ ಕಾಲಿನ ಧೂಳಿಗೂ ವಿಜಯೇಂದ್ರ ಸಮನಲ್ಲ. ವಿಜಯೇಂದ್ರಗೆ ರಾಜಕೀಯ ಗೊತ್ತಿಲ್ಲ. ಉತ್ತಮ ಭವಿಷ್ಯವಿದೆ, ಈಗ ಪದವಿ ತ್ಯಾಗ ಮಾಡಲಿ ಎಂದು ಹೇಳಿದ್ದಾರೆ.
ಬಿಜೆಪಿಯ ಶೇಕಡ 70ರಷ್ಟು ಶಾಸಕರು ನನ್ನ ಸ್ನೇಹಿತರೇ ಆಗಿದ್ದಾರೆ. ರೇಣುಕಾಚಾರ್ಯಗೆ ಬೇರೆ ದಾರಿ ಇಲ್ಲ ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ವಿಜಯೇಂದ್ರ ಜೊತೆಗಿದ್ದಾರೆ. ನನ್ನನ್ನು ಅಥವಾ ಯತ್ನಾಳ್ ಅವರನ್ನು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರನ್ನಾಗಿ ಮಾಡಬೇಡಿ. ಎಲ್ಲರನ್ನೂ ಸಮಾನವಾಗಿ ತೆಗೆದುಕೊಂಡು ಹೋಗುವವರಿಗೆ ಅಧ್ಯಕ್ಷ ಸ್ಥಾನ ನೀಡಿ ಎಂದು ಹೇಳಿದ್ದಾರೆ.