ರಾಮನಗರ: ಉತ್ತರ ಭಾರತದ ಪ್ರವಾಸಕ್ಕೆಂದು ಹೋಗಿದ್ದ ರಾಮನಗರ ಮೂಲದ ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ಘಟನೆ ನಡೆದಿದೆ.
ರಾಮನಗರದ ಅಂಬೇಡ್ಕರ್ ನಗರದ ನಿವಾಸಿ ಲಿಂಗರಾಜು (55) ನಾಪತ್ತೆಯಾಗಿರುವ ವ್ಯಕ್ತಿ. ಲಿಂಗರಾಜು ಹಾಗೂ ಕುಟುಂಬದ ಕೆಲ ಸ್ನೇಹಿತರು ಉತ್ತರ ಭಾರತ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ದೆಹಲಿಯ ಪಹರ್ಗಂಜ್ ಪ್ರದೇಶದಲ್ಲಿ ಲಿಂಗರಾಜು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾರೆ.
ಪಹರ್ಗಂಜ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.