ಹಾಸನ: ವಿವಿಧ ಬಗೆಯ ಚಹಾ ತಯಾರಿಕೆ ಮೂಲಕ ಜನಪ್ರಿಯರಾಗಿದ್ದ ಉಪ್ಪಿ ಟೀ ಕ್ಯಾಂಟೀನ್ ಮಾಲೀಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರದ ಬಾಗೆ ಗ್ರಾಮದಲ್ಲಿ ನಡೆದಿದೆ.
ಸುರೇಶ್ ಆತ್ಮಹತ್ಯೆಗೆ ಶರಣಾಗಿರುವ ಉಪ್ಪಿ ಟೀ ಕ್ಯಾಂಟೀನ್ ಮಾಲೀಕ. ತಮ್ಮ ಕ್ಯಾಂಟಿನ್ ನ ಒಳಭಾಗದಲ್ಲಿಯೇ ನೇಣಿಗೆ ಕೊರಳೊಡ್ಡಿದ್ದಾರೆ.
ಆತ್ಮಹತ್ಯೆಗೂ ಮುನ್ನ ಸುರೇಶ್ ಬರೆದಿಟ್ಟಿರುವ ಡೆತ್ ನೋಟ್ ಪತ್ತೆಯಾಗಿದ್ದು, ಅದರಲ್ಲಿ ‘ಹಾಸಿಗೆ ಇದ್ದಷ್ಟೇ ಕಾಲು ಚಾಚಬೇಕು. ಯಾರೂ ಸಾಲ ಮಾಡಬೇಡಿ.
ಸಾಲದಿಂದ ಬದುಕು ನಾಶವಾಗುತ್ತದೆ. ನನ್ನ ಸಾವಿಗೆ ಯಾರೂ ಕಾರಣರಲ್ಲ’ ಎಂದು ಬರೆದಿಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.