ಬೆಂಗಳೂರು : 2024-25 ನೇ ಸಾಲಿನಲ್ಲಿ ರಾಜ್ಯದ ಆಯ್ದ ಶಾಲೆಗಳ 3, 6, ಮತ್ತು 9ನೇ ತರಗತಿಯ ವಿದ್ಯಾರ್ಥಿಗಳನ್ನು PARAKH ರಾಷ್ಟ್ರೀಯ ಸರ್ವೇಕ್ಷಣ್-2024 ಗೆ ಒಳಪಡಿಸುವ ಸಂಬಂಧ ವಿವಿಧ ಹಂತದ ಅಧಿಕಾರಿಗಳ ಕರ್ತವ್ಯ ಮತ್ತು ಜವಾಬ್ದಾರಿಗಳ ಕುರಿತು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ NAC, ನವದೆಹಲಿ ರವರ ಆದೇಶದಂತೆ ರಾಜ್ಯದ ಆಯ್ದ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ 3. 6 ಮತ್ತು 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಆಯ್ದ ಗರಿಷ್ಠ 30 (ತರಗತಿವಾರು ಗರಿಷ್ಠ 30) ವಿದ್ಯಾರ್ಥಿಗಳಿಗೆ ದಿನಾಂಕ: 04.12.2024 ರಂದು PARAKH RASHTRIYA SARVEKSHAN-2024 ಸಮೀಕ್ಷೆಯನ್ನು ಕೆ.ಎಸ್.ಕ್ಯು.ಎ.ಎ.ಸಿ ವತಿಯಿಂದ ನಡೆಸಲಾಗುತ್ತಿದೆ.
ರಾಜ್ಯದ ಆಯ್ದ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಆಯ್ದ ಶಾಲೆಗಳ 3, 6 ಮತ್ತು 9ನೇ ತರಗತಿಗಳ ಆಯ್ದ ವಿದ್ಯಾರ್ಥಿಗಳಿಗೆ ಸಮೀಕ್ಷೆ ಕೈಗೊಳ್ಳುವುದು.
ಮಾಧ್ಯಮ:
ಒಟ್ಟು 06 ಮಾಧ್ಯಮಗಳು ಕನ್ನಡ, ಇಂಗ್ಲೀಷ್, ಹಿಂದಿ, ಉರ್ದು, ಮರಾಠಿ, ತಮಿಳು, ತೆಲುಗು,
ವಿಶೇಷಚೇತನವುಳ್ಳ ವಿದ್ಯಾರ್ಥಿಗಳಿಗೆ 30 ನಿಮಿಷಗಳ ಹೆಚ್ಚುವರಿ ಕಾಲಾವಕಾಶವನ್ನು ಒದಗಿಸಲಾಗಿದೆ ಇನ್ನುಳಿದಂತೆ RPWD Act 2016 ರ ಪ್ರಕಾರ ಅವಶ್ಯಕ ಸೌಲಭ್ಯಗಳನ್ನು ನೀಡುವುದು.
ಪ್ರಶ್ನೆಪತ್ರಿಕೆ, ಪ್ರಶ್ನಾವಳಿ ಮತ್ತು ಒ.ಎಂ.ಆರ್ ಸ್ವರೂಪ:-
ಭಾಷೆ, ಗಣಿತ, ಪರಿಸರ ಅಧ್ಯಯನ (The world around us)/ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳ ಬಹುಆಯ್ಕೆ ಮಾದರಿ ಪ್ರಶ್ನೆಗಳನ್ನು ಒಳಗೊಂಡ ಒಂದು ಪ್ರಶ್ನೆಪತ್ರಿಕೆಯ ಬುಕ್ಲೆಟ್ ಆಗಿರುತ್ತದೆ.
ತರಗತಿ 3:- 3ನೇ ತರಗತಿಗೆ 31, 32, 33, 34, 35, 36 ಎಂಬ 6 ವರ್ಷನ್ ಬುಕ್ಲೆಟ್ ಗಳಿರುತ್ತವೆ. ಪ್ರತಿ ಬುಕ್ಲೆಟ್ಗಳು ಭಾಷೆ, ಗಣಿತ, ಪರಿಸರ ಅಧ್ಯಯನ (The world around us) ಒಳಗೊಂಡಂತೆ ಮೂರೂ ವಿಷಯಗಳಿಗೆ ತಲಾ 15 ಪ್ರಶ್ನೆಗಳಂತೆ ಒಟ್ಟು 45 ಪ್ರಶ್ನೆಗಳನ್ನು ಒಳಗೊಂಡಿರುತ್ತದೆ.
ತರಗತಿ 6:- 6ನೇ ತರಗತಿಗೆ 61, 62, 63, 64, 65, 66 ಎಂಬ 6 ವರ್ಷನ್ ಬುಕ್ಲೆಟ್ಗಳಿರುತ್ತವೆ. ಪ್ರತಿ ಬುಕ್ಲೆಟ್ಗಳು ಭಾಷೆ, ಗಣಿತ, ಪರಿಸರ ಅಧ್ಯಯನ (The world around us) ಒಳಗೊಂಡಂತೆ ಮೂರೂ ವಿಷಯಗಳಿಗೆ ತಲಾ 17 ಪ್ರಶ್ನೆಗಳಂತೆ ಒಟ್ಟು 51 ಪ್ರಶ್ನೆಗಳನ್ನು ಒಳಗೊಂಡಿರುತ್ತದೆ.
3 9:- 90 d 91, 92, 93, 94, 95 96 97 98 2 8 ಬುಕ್ಲೆಟ್ಗಳಿರುತ್ತವೆ. ಪ್ರತಿ ಬುಕ್ಲೆಟ್ಳು ಭಾಷೆ, ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳಲ್ಲಿ ಯಾವುದಾದರೂ ಮೂರು ವಿಷಯಗಳಿಗೆ ಒಟ್ಟು 60 ಪ್ರಶ್ನೆಗಳನ್ನು ಒಳಗೊಂಡಿರುತ್ತದೆ.
3ನೇ ತರಗತಿಗೆ:-
3ನೇ ತರಗತಿಯ ವಿದ್ಯಾರ್ಥಿಗಳು ಪ್ರಶ್ನೆಪತ್ರಿಕೆಯ ಬುಕ್ಲೆಟ್ನಲ್ಲಿ ಉತ್ತರವನ್ನು ವೃತ್ತ ಹಾಕುವ ಮೂಲಕ ಗುರುತಿಸುವುದು(OMR ನಲ್ಲಿ ವಿದ್ಯಾರ್ಥಿಗಳು ಯಾವುದೇ ಉತ್ತರ/ಪ್ರತಿಕ್ರಿಯೆಗಳನ್ನು ಶೇಡ್ ಮಾಡುವಂತಿಲ್ಲ).
ವಿದ್ಯಾರ್ಥಿಗಳು ಪ್ರಶ್ನೆಪತ್ರಿಕೆಯ ಬುಕ್ಲೆಟ್ನಲ್ಲಿ ವೃತ್ತ ಹಾಕುವ ಮೂಲಕ ಗುರುತಿಸಿದ ಉತ್ತರಗಳನ್ನು Field Investigator ಗಳು 3ನೇ ತರಗತಿಯ OMR ಗಳಲ್ಲಿ ಶೇಡ್ ಮಾಡುವುದು.
6 ಮತ್ತು 9ನೇ ತರಗತಿಗೆ:-
6 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳು ತಮ್ಮ ಉತ್ತರವನ್ನು OMR ನಲ್ಲಿ ಸ್ವತಃ ತಾವೇ (ವಿದ್ಯಾರ್ಥಿಗಳೇ) ಶೇಡ್ ಮಾಡುವುದು.
ಪ್ರಶ್ನಾವಳಿಗಳು:-
ಸಮೀಕ್ಷಾ ಕಾರ್ಯಕ್ಕೆ ಮೂರು ರೀತಿಯ ಪ್ರಶ್ನಾವಳಿಗಳನ್ನು ನೀಡಲಾಗುತ್ತದೆ.
ឯ ដ (Pupil Questionnaire – PQ)
ថថ ដ (Teacher Questionnaire-TQ)
(School Questionnaire-SQ)
ឯ ដ (Pupil Questionnaire-PQ):-
ಸಮೀಕ್ಷೆಗೆ ಒಳಪಟ್ಟ ಪ್ರತಿ ಮಗುವಿಗೂ ವಿದ್ಯಾರ್ಥಿ ಪ್ರಶ್ನಾವಳಿಯನ್ನು ನೀಡಿ ವಿದ್ಯಾರ್ಥಿಗಳ ಉತ್ತರ/ಪ್ರತಿಕ್ರಿಯೆಗಳನ್ನು ಪಡೆಯಬೇಕಾಗಿದೆ. ವಿದ್ಯಾರ್ಥಿ ಪ್ರಶ್ನಾವಳಿಗೆ (PO) ಉತ್ತರಿಸಲು ಪ್ರತ್ಯೇಕ OMR ನೀಡಲಾಗುತ್ತಿದ್ದು, OMRನ ಒಂದು ಭಾಗದಲ್ಲಿ (Side-1) ಸಾಮಾನ್ಯ ಸೂಚನೆಗಳು ಹಾಗೂ OMRನ ಮತ್ತೊಂದು ಭಾಗದಲ್ಲಿ (Side-2) ಪ್ರಶ್ನಾವಳಿಗೆ (PO) ಪ್ರತಿಕ್ರಿಯೆಗಳನ್ನು ಶೇಡ್ ಮಾಡಲು ಅವಕಾಶ ನೀಡಲಾಗಿದ್ದು, ಅದರಂತೆ ಉತ್ತರ/ಪ್ರತಿಕ್ರಿಯೆಗಳನ್ನು ಶೇಡ್ ಮಾಡಬೇಕಿರುತ್ತದೆ.
3ನೇ ತರಗತಿಯ ವಿದ್ಯಾರ್ಥಿಗಳು ವಿದ್ಯಾರ್ಥಿ ಪ್ರಶ್ನಾವಳಿ (PQ) ಬುಕ್ಲೆಟ್ ನಲ್ಲಿಯೇ ಪ್ರತಿಕ್ರಿಯೆಗಳನ್ನು ಗುರುತಿಸುವುದು. ಪ್ರಶ್ನಾವಳಿ ಬುಕ್ಲೆಟ್ಗಳಲ್ಲಿ ವಿದ್ಯಾರ್ಥಿಗಳು ಗುರುತಿಸಿದ ಉತ್ತರ/ಪ್ರತಿಕ್ರಿಯೆಯನ್ನು ಯಥಾವತ್ತಾಗಿ Field Investigator ರವರು OMR ನಲ್ಲಿ ಶೇಡ್ ಮಾಡುವುದು.
6 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳು (PQ) ಪ್ರಶ್ನಾವಳಿಗೆ ಸಂಬಂಧಿಸಿದ ಉತ್ತರ/ಪ್ರತಿಕ್ರಿಯೆಗಳನ್ನು ಯಾವ ಭಾಗಗಳಲ್ಲಿ ಉತ್ತರಿಸಬೇಕು ಎಂಬ ಸರಿಯಾದ ಮಾಹಿತಿಯನ್ನು ಕ್ಷೇತ್ರಪರಿವೀಕ್ಷಕರು(FI’s) ಗಳು ವಿದ್ಯಾರ್ಥಿಗಳಿಗೆ ನೀಡುವುದು.