ಉತ್ತರ ಪ್ರದೇಶದ ಮೊರಾದಾಬಾದ್ ನ ರಸ್ತೆಯೊಂದರಲ್ಲಿ ಸಮವಸ್ತ್ರವಿಲ್ಲದೆ ನಡೆದುಕೊಂಡು ಹೋಗುತ್ತಿದ್ದ ಮಹಿಳಾ ಕಾನ್ಸ್‌ಟೇಬಲ್ ಮೇಲೆ ಹಾಡಹಗಲೇ ಯುವಕನೊಬ್ಬ ಹಲ್ಲೆ ನಡೆಸಿದ್ದಾನೆ. ಈ ಘಟನೆಯು ಜನರನ್ನು ಬೆಚ್ಚಿಬೀಳಿಸಿದ್ದು, ಮಹಿಳಾ ಸುರಕ್ಷತೆಯ ಬಗ್ಗೆ ಪ್ರಶ್ನೆ ಏಳುವಂತೆ ಮಾಡಿದೆ.
ಸ್ಥಳದಿಂದ ಸೆರೆ ಹಿಡಿಯಲಾದ ವೀಡಿಯೊದಲ್ಲಿ ಬೈಕ್ ಸವಾರನೊಬ್ಬ ಮಹಿಳಾ ಪೇದೆ ಬಳಿಗೆ ಬರುವುದು ಮತ್ತು ಸ್ವಲ್ಪ ಸಮಯದ ನಂತರ ಅವಳೊಂದಿಗೆ ಅನುಚಿತವಾಗಿ ವರ್ತಿಸುವುದು ದಾಖಲಾಗಿದೆ.
ಬೈಕ್ ಸವಾರ, ಅಮರೀನ್ ಎಂದು ಗುರುತಿಸಲಾದ ಕಾನ್‌ಸ್ಟೆಬಲ್‌ಗೆ ಕಪಾಳಮೋಕ್ಷ ಮಾಡಿ ಅವರನ್ನು ಅನುಚಿತವಾಗಿ ಸ್ಪರ್ಶಿಸಿದ್ದಾನೆ. ಅಲ್ಲದೇ ಮುತ್ತಿಕ್ಕಲು ಪ್ರಯತ್ನಿಸಿದ್ದಾನೆ.
ಏತನ್ಮಧ್ಯೆ, ಅಲ್ಲಿದ್ದ ವೃದ್ಧರೊಬ್ಬರು ಬೈಕ್ ಸವಾರನ ಕೃತ್ಯವನ್ನು ತಡೆದು ಅಮರೀನ್ ಅವರನ್ನು ಬಿಡಿಸಲು ಪ್ರಯತ್ನಿಸುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದಾಗಿದೆ.
ಅಷ್ಟರಲ್ಲಿ ವೃದ್ದ ವ್ಯಕ್ತಿ ನೆರವಿಗೆ ಮತ್ತಷ್ಟು ಯುವಕರು ಬಂದಿದ್ದು, ಮಹಿಳಾ ಪೇದೆ ಮೇಲೆ ದಾಳಿ ಮಾಡುತ್ತಿದ್ದ ಯುವಕನನ್ನು ಹಿಡಿದುಕೊಂಡಿದ್ದಾರೆ. ಬಳಿಕ ಅಮರೀನ್ ಸ್ಥಳೀಯ ಪೊಲೀಸ್ ಠಾಣೆಗೆ ಕರೆ ಮಾಡಿದ್ದಾರೆ.
ಈಗ ದಾಖಲಾದ ಪ್ರಕರಣದಲ್ಲಿ, ಅಮರೀನ್ ತನ್ನ ಖಾಸಗಿ (ಕರ್ತವ್ಯವಿಲ್ಲದ) ಸಮಯದಲ್ಲಿ ಯುವಕ ನಿಂದನೆ ಮತ್ತು ಹಲ್ಲೆ ನಡೆಸಿದ್ದಾನೆ ಎಂದು ಉಲ್ಲೇಖಿಸಿದ್ದಾರೆ.
ಮುಂದಿನ ಕ್ರಮದ ಕುರಿತು ವಿಷಯ ತಿಳಿಸಿರುವ ಮೊರಾದಾಬಾದ್ ಪೊಲೀಸರು, ಮಹಿಳಾ ಪೇದೆಯ ಪ್ರಕರಣವನ್ನು ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಬಿಡುಗಡೆ ಮಾಡಿದ್ದಾರೆ.
यूपी में महिलाएं कितनी सुरक्षित हैं,सबूत देख लीजिए।
तस्वीर मुरादाबाद की है, जहां सरेआम महिला कांस्टेबल के साथ युवक छेड़छाड़ करता हैं और विरोध करने पर मारपीट भी।
आरोपियों पर सख्त से सख्त कार्रवाई हो। pic.twitter.com/H7tbK76n3y— Akhilesh Yadav (Son Of PDA) (@SocialistLeadr) December 1, 2024