ಹಳಿಯಾಳ: ಗಂಟಲಲ್ಲಿ ಬಲೂನ್ ಸಿಲುಕಿ ಬಾಲಕ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಜೋಗನಕೊಪ್ಪದಲ್ಲಿ ನಡೆದಿದೆ.
7ನೇ ತರಗತಿ ವಿದ್ಯಾರ್ಥಿ ನವೀನ್ ನಾರಾಯಣ ಬೆಳಗಾಂವ್ಕರ್ ಮೃತ ಬಾಲಕ. ಬಲೂನ್ ಊದುವಾಗ ಬಲೂನ್ ಗಂಟಲಲ್ಲಿ ಸಿಲುಕಿದೆ.
ಬಲೂನ್ ಊದುವಾಗ ಉಸಿರು ಎಳೆದುಕೊಳ್ಳುತ್ತಿದ್ದಂತೆ ಬಲೂನ್ ಬಾಲಕನ ಗಂಟಲಲ್ಲಿ ಸಿಲುಕಿದ್ದು, ಬಲೂನ್ ತೆಗೆಯಲು ಕುಟುಂಬದವರು ಸಾಕಷ್ಟು ಪ್ರಯತ್ನಿಸಿದ್ದಾರೆ. ಆದರೂ ಸಾಧ್ಯವಾಗಿಲ್ಲ. ಬಳಿಕ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆಯೇ ಬಾಲಕ ಕೊನೆಯುಸಿರೆಳೆದಿದ್ದಾನೆ.
ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.