ಬೀದರ್: ರೈತರ ಪಟ್ಟಾ ಜಮೀನು ಪಟ್ಟಾ ಆಗಿಯೇ ಉಳಿಯಲಿದೆ ಎಂದು ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.
ಬೀದರ್ ನಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಪಟ್ಟಾ ಜಮೀನು ಪಟ್ಟಾ ಆಗೇ ಉಳಿಯುತ್ತದೆ. ಯಾವುದೇ ಪರಿಸ್ಥಿತಿಯಲ್ಲಿ ಅದು ಸರ್ಕಾರದ ಹೆಸರಿಗೆ ಸೇರುವುದಿಲ್ಲ ಎಂದು ಹೇಳಿದ್ದಾರೆ.
ಪಹಣಿಯಲ್ಲಿ ವಕ್ಫ್ ಎಂದು ನಮೂದಾಗಿದ್ದಲ್ಲಿ ಅದನ್ನು ಸರಿಪಡಿಸಲಾಗುವುದು. ಬೀದರ್ ತಾಲೂಕಿನ ಚಟನಹಳ್ಳಿ, ಧರ್ಮಪುರ ಗ್ರಾಮಗಳಿಗೆ ನಾನೇ ಖುದ್ದಾಗಿ ಭೇಟಿ ನೀಡುತ್ತೇನೆ. ಅನ್ಯಾಯವಾಗದಂತೆ ನೋಡಿಕೊಳ್ಳಲಾಗುವುದು ಎಂದು ರೈತರಿಗೆ ಧೈರ್ಯ ತುಂಬುತ್ತೇನೆ. ಶೇಕಡ 80ರಷ್ಟು ಪಹಣಿಗಳನ್ನು ಈಗಾಗಲೇ ಅಧಿಕಾರಿಗಳು ಸರಿಪಡಿಸಿದ್ದಾರೆ. ರೈತರ ರೈತರಿಗೆ ತೊಂದರೆ ಆಗದ ರೀತಿಯಲ್ಲಿ ಅವರ ಹೆಸರಿಗೆ ಮಾಡಲು ಸೂಚಿಸಲಾಗಿದೆ. ಎಷ್ಟೇ ಪ್ರಕರಣಗಳಿದ್ದರೂ ಸರಿಪಡಿಸಲಾಗುವುದು ಎಂದು ಹೇಳಿದ್ದಾರೆ.