ಬಳ್ಳಾರಿ: ಒಕ್ಕಲಿಗ ಮಹಾಸಂಸ್ಥಾನದ ಚಂದ್ರಶೇಖರ ಸ್ವಾಮೀಜಿ ವಿರುದ್ಧ ಕೇಸ್ ದಾಖಲಾಗಿದ್ದಕ್ಕೆ ಇದರ ವಿರುದ್ಧ ಹೋರಾಟ ಮಾಡುತ್ತೇವೆ ಎಂದಿದ್ದ ವಿಪಕ್ಷನಾಯಕ ಆರ್.ಅಶೋಕ್ ಹೇಳಿಕೆಗೆ ಕಿಡಿಕಾರಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಹಿಂದೆ ನಿರ್ಮಲಾನಂದನಾಥ ಸ್ವಾಮೀಜಿ ಫೋನ್ ಟ್ಯಾಪ್ ಆದಾಗ ಆರ್.ಅಶೋಕ್, ಬಿಜೆಪಿ ನಾಯಕರು ಎಲ್ಲಿಗೆ ಹೋಗಿದ್ದರು? ಸುಮ್ಮನೆ ಬೆಂಕಿ ಹಚ್ಚಿ ಬೀಡಿ ಸೇದೋ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದರು. ಡಿ.ಕೆ.ಶಿವಕುಮಾರ್ ಹೇಳಿಕೆಗೆ ಆರ್.ಅಶೋಕ್ ತಿರುಗೇಟು ನೀಡಿದ್ದಾರೆ.
ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ್, ನನಗೆ ಬೀಡಿ ಸೇದಿ ಅಭ್ಯಾಸವಿಲ್ಲ. ನನಗೆ ಚಟವಿಲ್ಲ, ಅವರಿಗೆ ಅಭ್ಯಾಸ ಇದೆ ಅದ್ಕೆ ಹೇಳಿದ್ದಾರೆ ಎಂದು ತಿರುಗೇಟು ನೀಡಿದರು.
ನಾನು ಆದಿಚುಂಚನಗಿರಿ ಮಠದ ಭಕ್ತ. ಇಬ್ಬರೂ ಸ್ವಾಮೀಗಳು ನನ್ನನ್ನು ಮನೆ ಮಗ ಅಂತಾನೇ ಕರೆಯೋದು. ಮಠಕ್ಕೆ, ಶಿಕ್ಷಣಕ್ಕೆ ನೂರಾರು ಎಕರೆ ಜಮೀನು ಕೊಟ್ಟಿದ್ದೇನೆ. ಫೋನ್ ಟ್ಯಾಪ್ ಆದಾಗ ಇದೇ ಡಿಕೆಶಿ ಮಿನಿಸ್ಟರ್ ಆಗಿದ್ದರು. ಆಗ ಜೋಡೆತ್ತು ಎಂದು ಕೈಎತ್ತಿದ್ರು, ಇವಾಗೇನು ಕುಂಟೆತ್ತಾ? ಎಂದು ಟಾಂಗ್ ನೀಡಿರು.
ಆಗಲೂ ನಾವು ಪ್ರತಿಭಟನೆ ಮಾಡಿದ್ದೇವೆ. ಈಗಲೂ ನಾವು ಹೋರಾಟ ಮಾಡುತ್ತಿದ್ದೇವೆ. ನಮಗೆ ಬೆಂಕಿ ಹಚ್ಚುವು, ಬೀಡಿ ಸೇದುವುದು ಗೊತ್ತಿಲ್ಲ ಎಂದು ಕಿಡಿಕಾರಿದರು.