ಕ್ರೀಡೆಗಾಗಿ ಅಭ್ಯಾಸ ನಡೆಸುತ್ತಿದ್ದ ವೇಳೆ ಬಾಲಕನೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯ ಸಿರೌಲಿ ಗ್ರಾಮದಲ್ಲಿ ನಡೆದಿದೆ.
14 ವರ್ಷದ ಮೋಹಿತ್ ಚೌದರಿ ಮೃತ ಬಾಲಕ. ಶಾಲೆಯಲ್ಲಿ ಏರ್ಪಡಿಸಲಾಗಿದ್ದ ಕ್ರೀದಾ ಸ್ಪರ್ಧೆಗಾಗಿ ಅಭ್ಯಾಸ ಮಾಡುತ್ತಿದ್ದ. ಓಟದ ಅಭ್ಯಾಸ ಮಾಡುತ್ತಿದ್ದಾಗ ಮೂರನೆ ಸುತ್ತು ಓಡುತ್ತಿದ್ದಾಗ ಬಾಲಕ ಏಕಾಏಕಿ ಕುಸಿದು ಬಿದ್ದಿದ್ದಾನೆ. ತಕ್ಷಣ ಆತನ ಸ್ನೇಹಿತರು ಪೋಷಕರಿಗೆ ಮಾಹಿತಿ ನೀಡಿದ್ದಾರೆ.
ತಕ್ಷಣ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಷ್ಟರಲ್ಲೇ ಬಾಲಕ ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ ಅಲಿಗಢದಲ್ಲಿ ಕಳೆದ 25 ದಿನಗಳಲ್ಲಿ ಮೂವರು ಹೃದಯಾಘತಕ್ಕೆ ಬಲಿಯಾಗಿದ್ದಾರೆ. ಅಲಿಗಢದ ಅರ್ರಾನಾದಲ್ಲಿ 20 ವರ್ಷದ ಯುವತಿ ಓದುತ್ತಿದ್ದವಳು ಹೃದಯಾಘತದಿಇಂದ ಸಾವನ್ನಪ್ಪಿಇದ್ದಳು. ಬಳಿಕ ಲೋಧಿ ನಗರದಲ್ಲಿ 8 ವರ್ಷದ ಬಾಲಕಿ ಆತವಾಡುತ್ತಿದ್ದಾಗ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಳು. ಇದೀಗ 14 ವರ್ಷದ ಬಾಲಕ ಹೃದಯಾಘಾತದಿಂದ ಸಾವನ್ನಪ್ಪಿರುವುದು ಆತಂಕಕ್ಕೆ ಕಾರಣವಾಗಿದೆ.