ಡಿಸೆಂಬರ್ 21ಕ್ಕೆ ‘ಗೇಮ್ ಚೇಂಜರ್’ ಚಿತ್ರದ ಪ್ರೀ ರಿಲೀಸ್ ಇವೆಂಟ್ 01-12-2024 2:04PM IST / No Comments / Posted In: Featured News, Live News, Entertainment ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅಭಿನಯದ ‘ಗೇಮ್ ಚೇಂಜರ್’ ಮುಂದಿನ ತಿಂಗಳು ಜನವರಿ 10ರಂದು ತೆರೆ ಮೇಲೆ ಬರಲಿದ್ದು, ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಚಿತ್ರತಂಡ ಇದೀಗ ಡಿಸೆಂಬರ್ 21ರಂದು ಯು ಎಸ್ ಎ ನಲ್ಲಿ ಪ್ರೀ ರಿಲೀಸ್ ಇವೆಂಟ್ ಕಾರ್ಯಕ್ರಮವನ್ನು ನೆರವೇರಿಸುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಘೋಷಣೆ ಮಾಡಿದೆ. ಈ ಚಿತ್ರವನ್ನು ದಿಲ್ ರಾಜು ಹಾಗೂ ಶಿರೀಶ್ ನಿರ್ಮಾಣ ಮಾಡಿದ್ದು, ಥಮನ್ ಎಸ್ ಸಂಗೀತ ಸಂಯೋಜನೆ ನೀಡಿದ್ದಾರೆ. ರಾಮ್ ಚರಣ್ಗೆ ಜೋಡಿಯಾಗಿ ಕಿಯಾರಾ ಅಡ್ವಾಣಿ ಅಭಿನಯಿಸಿದ್ದು, ಅಂಜಲಿ, ಸಮುದ್ರಕಣಿ, ಎಸ್.ಜೆ.ಸೂರ್ಯ, ಶ್ರೀಕಾಂತ್, ಸುನಿಲ್ ಉಳಿದ ಪಾತ್ರವರ್ಗದಲ್ಲಿದ್ದಾರೆ. ಸಾಯಿ ಮಾಧವ್ ಬುರ್ರಾ ಸಂಭಾಷಣೆ, ಎಸ್ ತಿರುನಾವುಕ್ಕರಸು ಛಾಯಾಗ್ರಹಣ, ಶಮೀರ್ ಮುಹಮ್ಮದ್ ಸಂಕಲನವಿದೆ, ಹಾಗೂ ಅನ್ಬರಿವ್ ಸಾಹಸ ನಿರ್ದೇಶನವಿದೆ.