ಹಾಸನ : ಮದ್ಯದ ಅಮಲಿನಲ್ಲಿ ಚರಂಡಿಗೆ ಬಿದ್ದು ವ್ಯಕ್ತಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಬಿಕ್ಕೋಡಿಯಲ್ಲಿ ನಡೆದಿದೆ.
ಸಂಪೂರ್ಣ ಕೊಳಚೆಯಿಂದ ತುಂಬಿದ್ದ ಗುಂಡಿಗೆ ಬಿದ್ದು ಓಂಕಾರ್ (40) ಎಂಬ ವ್ಯಕ್ತಿ ಮೃತಪಟ್ಟಿದ್ದಾರೆ. ಘಟನೆ ಹಿನ್ನೆಲೆ ಚರಂಡಿ ಸ್ವಚ್ಚ ಮಾಡದ ಗ್ರಾಮ ಪಂಚಾಯತ್ ವಿರುದ್ಧ ಜನರು ಆಕ್ರೋಶ ಹೊರ ಹಾಕಿದ್ದಾರೆ.
ಮನೆಗೆ ತೆರಳುವಾಗ ಚರಂಡಿಗೆ ಬಿದ್ದು ಓಂಕಾರ್ ಮೃತಪಟ್ಟಿದ್ದು, ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.