alex Certify ‘ಫ್ಲಾಶ್ ಮದುವೆ‌ʼ ಮೂಲಕ 35 ಲಕ್ಷ ರೂ. ಗಳಿಕೆ; ಬೆಚ್ಚಿಬೀಳಿಸುತ್ತೆ ಚೀನಾ ಯುವತಿಯ ಕಥೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಫ್ಲಾಶ್ ಮದುವೆ‌ʼ ಮೂಲಕ 35 ಲಕ್ಷ ರೂ. ಗಳಿಕೆ; ಬೆಚ್ಚಿಬೀಳಿಸುತ್ತೆ ಚೀನಾ ಯುವತಿಯ ಕಥೆ…!

‘ಆನ್‌ ಲೈನ್‌ ವಿವಾಹ ವೇದಿಕೆಗಳ ಮೂಲಕ ಸಂಗಾತಿಗಳನ್ನು ಹುಡುಕುವ ವಿಚಾರ ಹೆಚ್ಚೆಚ್ಚು ಜನಪ್ರಿಯತೆ ಪಡೆಯುತ್ತಿದೆ. ಇಂತಹ ವೇದಿಕೆಗಳಲ್ಲಿ ತಮಗೆ ಸೂಕ್ತ ವಧು – ವರ ಸಿಗಬಹುದೆಂಬ ನಿರೀಕ್ಷೆಯಲ್ಲಿ ವಿವಾಹಕಾಂಕ್ಷಿಗಳು ಇಂತಹ ವೇದಿಕೆಗಳ ಮೊರೆ ಹೋಗುತ್ತಾರೆ. ಆದರೆ ಈಗ ಅಲ್ಲೂ ವಂಚನೆ ಶುರುವಾಗಿದೆ. ʼಫ್ಲಾಶ್ ಮ್ಯಾರೇಜ್’ ಯೋಜನೆಗಳಲ್ಲಿ ಭಾಗವಹಿಸುವ ಚೀನಾದ ಓರ್ವ ಯುವತಿ ಕೇವಲ 3 ತಿಂಗಳುಗಳಲ್ಲಿ 300,000 ಯುವಾನ್ (₹35 ಲಕ್ಷ ರೂಪಾಯಿ) ಗಳಿಸಿದ್ದಾರೆ.

ಆನ್‌ಲೈನ್ ಮ್ಯಾಚ್‌ ಮೇಕಿಂಗ್‌ ಜನಪ್ರಿಯವಾಗುತ್ತಿದ್ದಂತೆಯೇ ಇದರ ಜೊತೆಜೊತೆಗೆ ಉದ್ಯಮದಲ್ಲಿ ಮೋಸದ ಚಟುವಟಿಕೆಗಳನ್ನು ಹೆಚ್ಚಾಗತೊಡಗಿದೆ. ಮ್ಯಾಚ್‌ಮೇಕಿಂಗ್ ಸೇವೆಗಳ ಮೂಲಕ ಪಾಲುದಾರರನ್ನು ಹುಡುಕುವ ಏಕಾಂಗಿ ಪುರುಷರೇ ಇವರುಗಳ ಟಾರ್ಗೆಟ್‌ ಆಗಿದ್ದು, ಚೀನಾ ಇಂತಹ ವಂಚನೆಗಳ ಉಲ್ಬಣಕ್ಕೆ ಸಾಕ್ಷಿಯಾಗಿದೆ.

ವರದಿಗಳ ಪ್ರಕಾರ, ಮ್ಯಾಚ್‌ಮೇಕಿಂಗ್ ಹಗರಣಗಳಲ್ಲಿ ತೊಡಗಿರುವ ಗುಂಪು, ಯುವಕರನ್ನು ವಂಚಿಸಿರುವುದು ಹಾಗೂ ಭಾರಿ ಮೊತ್ತದ ಹಣವನ್ನು ಸುಲಿಗೆ ಮಾಡಿರುವುದು ಈಗ ಪೊಲೀಸರ ಪರಿಶೀಲನೆಗೆ ಒಳಪಟ್ಟಿದೆ. ಈ ಯೋಜನೆಗಳಲ್ಲಿ ಭಾಗವಹಿಸಿದ್ದ ಯುವತಿ ಕೆಲವೇ ತಿಂಗಳುಗಳಲ್ಲಿ 300,000 ಯುವಾನ್ (₹35 ಲಕ್ಷ ರೂಪಾಯಿ) ಗಳಿಸಿದ್ದಾರೆ.

ಗುಯಿಝೌ ಪ್ರಾಂತ್ಯದ ಗುಯಾಂಗ್‌ನಲ್ಲಿರುವ ನ್ಯಾಯಾಲಯವು ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಮಾಡಿದ ಹೇಳಿಕೆ ಪ್ರಕಾರ, ಹುವಾಗುವಾನ್ ಪ್ರದೇಶದ ಪೊಲೀಸ್ ಠಾಣೆಯು ಕಳೆದ ವರ್ಷ ಮಾರ್ಚ್‌ನಿಂದ ಮ್ಯಾಚ್‌ಮೇಕಿಂಗ್ ವಂಚನೆಯ 180 ವರದಿಗಳನ್ನು ಸ್ವೀಕರಿಸಿದೆ ಎಂಬ ಸಂಗತಿಯನ್ನು ಬಹಿರಂಗಪಡಿಸಿದೆ.

ʼಫ್ಲ್ಯಾಶ್ ಮದುವೆʼ ಎಂದರೇನು ?

ಸಾಮಾನ್ಯವಾಗಿ ಮ್ಯಾಚ್‌ಮೇಕಿಂಗ್ ಏಜೆನ್ಸಿಗಳು, ವಧು ಹುಡುಕುತ್ತಿರುವ ಪುರುಷರು ಮತ್ತು ನಿರೀಕ್ಷಿತ ವಧುವಿನ ನಡುವೆ ಸಭೆಗಳನ್ನು ಏರ್ಪಡಿಸುತ್ತದೆ. ಒಮ್ಮೆ ಇವರುಗಳು ಮದುವೆಯಾಗಲು ಒಪ್ಪಿಕೊಂಡರೆ, ಯುವಕರು ಏಜೆನ್ಸಿಯೊಂದಿಗೆ ಒಪ್ಪಂದಗಳಿಗೆ ಸಹಿ ಮಾಡಬೇಕಾಗುತ್ತದೆ ಮತ್ತು ವಧುವಿನ ಬೆಲೆಯಾಗಿ ಸಾವಿರಾರು ಯುವಾನ್ (ಚೀನಾ ಕರೆನ್ಸಿ) ಗಳನ್ನು ಪಾವತಿಸಬೇಕಾಗುತ್ತದೆ. ಈ ಮದುವೆಗಳನ್ನು “ಫ್ಲಾಶ್ ಮ್ಯಾರೇಜ್” ಎಂದು ಕರೆಯಲಾಗುತ್ತದೆ.

ಆದರೆ ಮದುವೆಯಾದ ಬಳಿಕ ಅಥವಾ ಅದಕ್ಕೂ ಮುನ್ನ ವಧು ಓಡಿಹೋಗುತ್ತಾರೆ, ಕಣ್ಮರೆಯಾಗುತ್ತಾರೆ ಅಥವಾ ಮದುವೆಯ ಸ್ವಲ್ಪ ಸಮಯದ ನಂತರ ಆಗಾಗ್ಗೆ ಘರ್ಷಣೆ ಸೇರಿದಂತೆ ವಿವಿಧ ವಿಧಾನಗಳ ಮೂಲಕ ವಿಚ್ಛೇದನಕ್ಕೆ ತಮ್ಮನ್ನು ವಿವಾಹವಾದ ಪುರುಷರನ್ನು ಒತ್ತಾಯಿಸುತ್ತಾರೆ. ವಿಚ್ಛೇದನದ ನಂತರ ಈಗಾಗಲೇ ವಿವಾಹವಾಗಿರುವುದನ್ನು ಮರೆಮಾಚಿ ಮತ್ತೊಬ್ಬ ವರನಿಗಾಗಿ ಏಜೆನ್ಸಿ ಜೊತೆ ಕೈಜೋಡಿಸಿ ಹಣ ಮಾಡಲು ನಿಲ್ಲುತ್ತಾರೆ.

ಮ್ಯಾಚ್‌ಮೇಕಿಂಗ್ ಏಜೆನ್ಸಿಯ ಮಾಜಿ ಉದ್ಯೋಗಿಯೊಬ್ಬರು ಪುರುಷ ಗ್ರಾಹಕರ ಕೊರತೆ ಎಂದಿಗೂ ಇಲ್ಲ ಎಂಬುದನ್ನು ಬಹಿರಂಗಪಡಿಸಿದ್ದಾರೆ. “ಪುರುಷ ಗ್ರಾಹಕರ ಮೂಲದ ಬಗ್ಗೆ ನಾವು ಚಿಂತಿಸುವುದಿಲ್ಲ. ದೇಶಾದ್ಯಂತ ಅನೇಕರು ಇದ್ದಾರೆ, ”ಎಂದು ಉದ್ಯೋಗಿ ಹೇಳಿದ್ದು “ನಾವು ಪ್ರತಿದಿನ 40 ರಿಂದ 50 ಅಭ್ಯರ್ಥಿಗಳಿಗೆ ಪುರುಷ ಗ್ರಾಹಕರನ್ನು ಆಯ್ಕೆ ಮಾಡಬಹುದು.” ಎಂದಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...