alex Certify ಆನೆಗುಂದಿ ನವವೃಂದಾವನದ ಪದ್ಮನಾಭ ತೀರ್ಥರ ಆರಾಧನೆ ವಿಚಾರ: ರಾಯರ ಮಠಕ್ಕೆ ಅವಕಾಶ ಎಂದ ಸುಪ್ರೀಂ ಕೋರ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆನೆಗುಂದಿ ನವವೃಂದಾವನದ ಪದ್ಮನಾಭ ತೀರ್ಥರ ಆರಾಧನೆ ವಿಚಾರ: ರಾಯರ ಮಠಕ್ಕೆ ಅವಕಾಶ ಎಂದ ಸುಪ್ರೀಂ ಕೋರ್ಟ್

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗುಂದಿ ಬಳಿಯ ನವವೃಂದಾವನ ಗಡ್ಡೆಯಲ್ಲಿನ ಶ್ರೀ ಪದ್ಮನಾಭ ತೀರ್ಥರ ಆರಾಧನೆ ವಿಚಾರವಾಗಿ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ.

ನವವೃಂದಾವನ ನಡುಗಡ್ದೆಯಲ್ಲಿ ನೆಲೆಸಿರುವ ಶ್ರೀ ಪದ್ಮನಾಭ ತೀರ್ಥರ ಆರಾಧನೆಯನ್ನು ಶೀ ರಾಘವೇಂದ್ರ ಸ್ವಾಮಿಗಳ ಮಠ ನಡೆಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ.

ಸುಪ್ರೀಂ ಕೋರ್ಟ್ ನಲ್ಲಿ ಈ ಬಗ್ಗೆ ಸುದೀರ್ಘ ಚರ್ಚೆ ನಡೆದಿದ್ದು, ಸುದೀರ್ಘ ವಾದ ಆಲಿಸಿದ ನ್ಯಾಯಾಲಯ, ರಾಘವೇಂದ್ರ ಸ್ವಾಮಿ ಮಠದ ಪೂರ್ವಿಕ ಗುರುಗಳಾದ ಪದ್ಮನಾಭ ತೀರ್ಥರ ಆರಾಧನೆಯನ್ನು ಮೊದಲ ಒಂದೂವರೆ ದಿನ ರಾಘವೇಂದ್ರ ಸ್ವಾಮಿ ಮಠದವರು ನಡೆಸಬೇಕು. ಅಂದರೆ ನ.29ರಂದು ಪೂರ್ವಾರಾಧನೆ ಹಾಗೂ ನ.30ರಂದು ನಡೆಯುವ ಮಧ್ಯಾರಾಧನೆಯ ಮಧ್ಯಾಹ್ನದವರೆಗೆ ಆರಾಧನೆಯ ಅವಕಾಶವನ್ನು ರಾಘವೇಂದ್ರಸ್ವಾಮಿಗಳ ಮಠಕ್ಕೆ ನೀಡಲಾಗಿದೆ.

ನ.30ರ ಮಧ್ಯಾಹ್ನದಿಂದ ಡಿ.1ರವರೆಗೆ ಉತ್ತರಾಧಿಮಠದಿಂದ ಆರಾಧನೆಗೆ ಅವಕಾಶ ನೀಡಲಾಗಿದೆ. ಮುಂದಿನ ಆದೇಶದವರೆಗೂ ಸುಪ್ರೀಂ ಕೋರ್ಟ್ ನ ಈ ಆದೇಶ ಚಾಲ್ತಿಯಲ್ಲಿರುತ್ತದೆ ಎಂದು ತಿಳಿಸಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...