‘ಆರ್ ಬಾಲಚಂದ್ರ ನಟಿಸಿ ನಿರ್ದೇಶನ ಹಾಗೂ ನಿರ್ಮಾಣ ಮಾಡಿರುವ ‘ಕಣಂಜಾರು’ ಚಿತ್ರದ ರೋಮ್ಯಾಂಟಿಕ್ ಹಾಡು ಈಗಾಗಲೇ ಗಾನ ಪ್ರಿಯರ ಗಮನ ಸೆಳೆದಿದ್ದು, ಮತ್ತೊಂದು ಹಾಡು ನಾಳೆ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ಚಿತ್ರ ತಂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ನಟ ಶರಣ್ ಚಿತ್ರ ತಂಡಕ್ಕೆ ಶುಭ ಹಾರೈಸಿದ್ದಾರೆ.
ಈ ಚಿತ್ರವನ್ನು ಆರ್ ಪಿ ಫಿಲಂಸ್ ಬ್ಯಾನರ್ ನಲ್ಲಿ ಆರ್ ಬಾಲಚಂದ್ರ ನಿರ್ಮಾಣ ಮಾಡಿದ್ದು, ಆರ್ ಬಾಲಚಂದ್ರ ಅವರಿಗೆ ಜೋಡಿಯಾಗಿ ಅಪೂರ್ವ ಅಭಿನಯಿಸಿದ್ದಾರೆ.
ಇನ್ನುಳಿದಂತೆ ಮೇಘಾ, ಶರ್ಮಿತಾ ಗೌಡ, ಪಿ ಎಸ್ ಶ್ರೀಧರ್, ರಾಮ್ ಕೃಷ್ಣ ಉಳಿದ ಪಾತ್ರ ವರ್ಗದಲ್ಲಿದ್ದಾರೆ. ಹರ್ಷವರ್ಧನ್ ರಾಜ್ ಸಂಗೀತ ಸಂಯೋಜನೆ ನೀಡಿದ್ದು, ವೆಂಕಿ ಯು.ಡಿ.ವಿ ಸಂಕಲನ, ಮಂಜುನಾಥ್ ಹೆಗಡೆ ಛಾಯಾಗ್ರಹಣ, ಕುಂಗ್ಫು ಚಂದ್ರು ಹಾಗೂ ನರಸಿಂಹ ಅವರ ಸಾಹಸ ನಿರ್ದೇಶನ, ಭಜರಂಗಿ ಮೋಹನ್ ನೃತ್ಯ ನಿರ್ದೇಶನವಿದೆ.