ನವೆಂಬರ್ 24 ಹಾಗೂ 25 ರಂದು ನಡೆದ ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆಯಲ್ಲಿ 4 ಆಟಗಾರರನ್ನು ರಿಟೈನ್ ಮಾಡಿಕೊಂಡಿದ್ದು, ಕನ್ನಡಿಗರಾದ ಕೆ ಎಲ್ ರಾಹುಲ್, ಮನ್ವಂತ್ ಕುಮಾರ್ ಹಾಗೂ ಕರಣ್ ನಾಯರ್ ಸೇರಿದಂತೆ ಹಲವಾರು ವಿದೇಶಿ ಬೌಲರ್ಗಳನ್ನು ಖರೀದಿ ಮಾಡಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿಯೂ ಕರ್ನಾಟಕದ ಆಟಗಾರರನ್ನು ಆಯ್ಕೆ ಮಾಡುವಲ್ಲಿ ಎಡವಿದ್ದು, ಟೀಕೆಗೆ ಗುರಿಯಾಗಿದೆ.
ಕೆ ಎಲ್ ರಾಹುಲ್ ಅಥವಾ ಅಕ್ಸರ್ ಪಟೇಲ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿ ಮುನ್ನಡೆಸಲಿದ್ದು, ಮೊದಲ ಟ್ರೋಫಿ ಗೆಲ್ಲುವ ಉತ್ಸಾಹದಲ್ಲಿದೆ. 9 ವರ್ಷದಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿದ್ದ ರಿಷಬ್ ಪಂತ್ ಅವರನ್ನು ಕೈ ಬಿಡಲಾಗಿದ್ದು, ಡೆಲ್ಲಿ ಕ್ಯಾಪಿಟಲ್ಸ್ ಅಭಿಮಾನಿಗಳಿಗೆ ಬೇಸರ ತಂದಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡ; ಕೆ ಎಲ್ ರಾಹುಲ್, ಹ್ಯಾರಿ ಬ್ರೂಕ್, ಮಿಚೆಲ್ ಸ್ಟಾರ್ಕ್,ಜೇಕ್ ಫ್ರೇಸರ್-ಮೆಕ್ಗುರ್ಕ್, ಅಶುತೋಷ್ ಶರ್ಮಾ, ಟಿ ನಟರಾಜನ್, ಕರುಣ್ ನಾಯರ್, ಮೋಹಿತ್ ಶರ್ಮಾ, ಸಮೀರ್ ರಿಜ್ವಿ, ಮಾಧವ್ ತಿವಾರಿ, ತ್ರಿಪುರಾಣ ವಿಜಯ್, ಅಜಯ್ ಮಂಡಲ್, ಮನ್ವಂತ್ ಕುಮಾರ್, ದುಷ್ಮಂತ ಚಮೀರ, ಡೊನೊವನ್ ಫೆರೇರಾ, ಮುಖೇಶ್ ಕುಮಾರ್, ವಿಪ್ರಜ್ ನಿಗಮ್, ದರ್ಶನ್ ನಲ್ಕಂಡೆ.